ದೊಡ್ಡಬಳ್ಳಾಪುರ:ತನ್ನ ಖಾತೆಯಲ್ಲಿರುವ ಹಣ ನೀಡಲು ನಿರಾಕರಿಸಿದ ಬ್ಯಾಂಕ್ ಸಿಬ್ಬಂದಿಯ ಮೇಲೆ ಗ್ರಾಹಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ತಾಲ್ಲೂಕಿನ ತೂಬಗೆರೆಯಲ್ಲಿ ಸೋಮವಾರ ನಡೆದಿದೆ.

ಗ್ರಾಮದಲ್ಲಿರುವಕಾರ್ಪೊರೇಷನ್ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವ ದುರ್ಗೇನಹಳ್ಳಿ ಗ್ರಾಮದ ಕುಮಾರ್,ತನ್ನ ಖಾತೆಯಲ್ಲಿದ್ದ ಹಣ ನೀಡಲುಸಿಬ್ಬಂದಿ ನಿರಾಕರಿಸಿದರೆಂದು ಕೊಪಗೊಂಡು ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ. ತಕ್ಷಣಎಚ್ಚೆತ್ತ ಸಿಬ್ಬಂದಿ ಮಚ್ಚಿನ ಏಟಿನಿಂದ ಪಾರಾದರು. ಈ ದೃಶ್ಯಾವಳಿ ಬ್ಯಾಂಕಿನಲ್ಲಿರುವ ಸಿಸಿ ಟಿವಿಯಲ್ಲಿ ರೆಕಾರ್ಡ್ ಅಗಿದೆ.

ತನ್ನ ಖಾತೆಯಲ್ಲಿರುವ ₹ 240 ನೀಡಬೇಕೆಂದು ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದ. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ಕಳೆದೊಂದು ವರ್ಷದಿಂದ ಬ್ಯಾಂಕಿನಲ್ಲಿ ವ್ಯವಹಾರ ನಡೆಸದಿರುವ ಕಾರಣ ಖಾತೆ ಸ್ಥಗಿತವಾಗಿದೆ ಎಂದು ತಿಳಿಸಿದರು. ಕೋಪಗೊಂಡ ಆತ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ.

ಈ ವೇಳೆ ಶಾಖೆಯಲ್ಲಿದ್ದ ಗ್ರಾಹಕರು ಕುಮಾರ್ನನ್ನು ಹಿಡಿದು ಮಚ್ಚುಕಸಿದುಕೊಂಡು ಥಳಿಸಿದರು. ಬಳಿಕ ಪೊಲೀಸರಿಗೆ ಒಪ್ಪಿಸಿದರು.ವ್ಯವಸ್ಥಾಪಕ ಸುರೇಶ್ ನೀಡಿರುವ ದೂರಿನ ಮೇರೆಗೆ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.