ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಸಾಲದ ಸುಳಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

Published 30 ಮೇ 2024, 14:31 IST
Last Updated 30 ಮೇ 2024, 14:31 IST
ಅಕ್ಷರ ಗಾತ್ರ

ಕನಕಪುರ: ‘ಸಾಲದ ಒತ್ತಡದಿಂದ ಕಂಗೆಟ್ಟು ಅದರಿಂದ ಆಚೆ ಬರಲಾಗದೆ ಡೆತ್‌ನೋಟ್‌ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ಬಾಣಂತ ಮಾರಮ್ಮ ಬಡಾವಣೆ ನಿವಾಸಿ, ರೂರಲ್‌ ಕಾಲೇಜಿನ ಉಪನ್ಯಾಸಕ ನಾಗೇಶ್‌ (62) ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ ಪತ್ನಿ, ಮಗ ಮತ್ತು ಮಗಳಿದ್ದಾರೆ.

ಬುಧವಾರ ಮಧ್ಯಾಹ್ನ ಕುಟುಂಬದವರ ಜತೆ ಸ್ನೇಹಿತರ ಮನೆಗೆ ಹೋಗಿ ಹಬ್ಬದ ಊಟ ಮುಗಿಸಿಕೊಂಡು ಬಂದವರು ಸಂಜೆ 6ಕ್ಕೆ ಗೆಟ್‌ ಟುಗೆದರ್‌‌ ಪಾರ್ಟಿ ಇದೆ. ಮುಗಿಸಿಕೊಂಡು ಬರುತ್ತೇನೆ ಎಂದು ಪತ್ನಿಗೆ ಹೇಳಿ ಹೋದವರು ತಮ್ಮ ಜಮೀನಿನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಜೇಬಿನಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.‌ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಸಿದ್ದಾರೆ.

ಡೆತ್‌ನೋಟ್‌ ಏನಿದೆ: ’ನಾನು ಹಣಕಾಸಿನ ವ್ಯವಹಾರ ನಡೆಸುತ್ತಿದ್ದೆ. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು. ನಂತರದಲ್ಲಿ ನನ್ನಿಂದ ಸಾಲ ಪಡೆದವರು ಬಡ್ಡಿ ನೀಡಿಲ್ಲ. ಮರು ಪಾತಿಸಿಲ್ಲ. ನಾನು ಮಾತ್ರ ಸಾಲ ಪಡೆದವರಿಗೆ ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದೆ. ₹7ಕೋಟಿ ಬಡ್ಡಿ ಕಟ್ಟಿದ್ದೇನೆ. ಸಾಲ ತೀರಿಸಲು ₹4ಕೋಟಿ ಆಸ್ತಿ, ಮನೆ ಮಾರಿದ್ದೇನೆ. ನನಗೆ ಕೊಡಬೇಕಾದವರೂ ವಾಪಸ್‌ ಹಣ ಕೊಡುತ್ತಿರಲಿಲ್ಲ. ನಾನು ತಿಂಗಳಿಗೆ ಸರಿಯಾಗಿ ಬಡ್ಡಿ ಕಟ್ಟುತ್ತಿದ್ದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ.‘

‘ಸಾಲಗಾರರ ಒತ್ತಡದಿಂದ ಹೀಗೆ ಮಾಡಿಕೊಳ್ಳುತ್ತಿದ್ದೇನೆ’  ಎಂದು ಡೆತ್‌ ನೋಟ್‌ ಕೊನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT