ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಬೀದಿನಾಯಿ ಹಾವಳಿ ತಪ್ಪಿಸಲು ಒತ್ತಾಯ

Last Updated 24 ಜೂನ್ 2020, 13:03 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿಯನ್ನು ತಡೆಗಟ್ಟಲು ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಜಯರಾಮ್ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ 23 ವಾರ್ಡುಗಳಿದ್ದು, ಪ್ರತಿ ವಾರ್ಡಿನ ಬೀದಿ ಬೀದಿಯಲ್ಲೂ ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಹಿಂಡು ಹಿಂಡಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಬರುತ್ತಿವೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅವರು ಪ್ರಾಣಿದಯಾ ಸಂಘಕ್ಕೆ ದೂರು ನೀಡಿ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ರಾಜು ಮಾತನಾಡಿ, ಮಾಂಸದ ಅಂಗಡಿಗಳ ಬಳಿ ಬಿಸಾಡುವ ತ್ಯಾಜ್ಯವನ್ನು ನೆಚ್ಚಿಕೊಂಡಿರುವ ಬೀದಿನಾಯಿಗಳು ಮಕ್ಕಳ ಮೇಲೆ ಎರಗುತ್ತಿವೆ. ಪ್ರಾಣಿದಯಾ ಸಂಘದ ಹೆಸರಿನಲ್ಲಿ ಪ್ರಾಣಿಗಳು ರಕ್ಷಣೆ ಮಾಡುವವರು ಅವುಗಳನ್ನು ಸಾಕಿ ಪೋಷಣೆ ಮಾಡಬೇಕು. ಅವುಗಳಿಂದ ಆಗುತ್ತಿರುವ ಅನಾಹುತ ತಪ್ಪಿಸುವವರು ಯಾರು ಎಂದು ಕಿಡಿಕಾರಿದರು.

ಸ್ಥಳೀಯ ನಿವಾಸಿ ಮುನಿಯಪ್ಪ ಮಾತನಾಡಿ, ಕುರಿಗಳನ್ನು ಮೇಯಿಸಲು ಹೊರಗೆ ಕರೆದುಕೊಂಡು ಹೋಗಲೂ ಭಯವಾಗುತ್ತದೆ. ನಾಯಿಗಳು ಕುರಿಗಳನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುತ್ತವೆ. ಅವುಗಳನ್ನು ಬಿಡಿಸಲು ತುಂಬಾ ಕಷ್ಟಪಡಬೇಕು. ಕೆಲವೊಮ್ಮೆ ನಮ್ಮ ಕೈಯಲ್ಲಿ ಕೋಲಿದ್ದರೂ ಹೆದರುವುದರಿಲ್ಲ. ನಮ್ಮ ರಕ್ಷಣೆ ಮಾಡಿಕೊಳ್ಳಲೇ ಆಗದಿದ್ದ ಮೇಲೆ ಕುರಿಗಳನ್ನು ರಕ್ಷಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಬೀದಿನಾಯಿಗಳು ಹಿಡಿಯಲು ವಿಶೇಷ ಅನುದಾನ ನಮ್ಮಲ್ಲಿ ಇಲ್ಲ. ಅವುಗಳನ್ನು ಹಿಡಿಯಬೇಕಾದರೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಹವಾನಿಯಂತ್ರಿತ ಕೊಠಡಿಯಲ್ಲಿಟ್ಟು, ಅವುಗಳಿಗೆ ಆಹಾರ ಕೊಟ್ಟು ಪೋಷಣೆ ಮಾಡಿದ ನಂತರ ಹೊರಗೆ ಬಿಡಬೇಕು. ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದರೂ ಪುನಃ ಅವು ಪಟ್ಟಣದೊಳಗೆ ವಾಪಸ್‌ ಬರುತ್ತಿವೆ ಎಂದು ಪುರಸಭಾ ಅಧಿಕಾರಿಯೊಬ್ಬರು ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT