ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ನಲ್ಲಿ ಕವಿದ ದಟ್ಟ ಮಂಜು

Published 15 ಜನವರಿ 2024, 7:03 IST
Last Updated 15 ಜನವರಿ 2024, 7:03 IST
ಅಕ್ಷರ ಗಾತ್ರ

ಆನೇಕಲ್: ಪಟ್ಟಣದಲ್ಲಿ ಭಾನುವಾರ ಆವರಿಸಿದ್ದ ದಟ್ಟ ಮಂಜಿನಿಂದಾಗಿ ಪಟ್ಟಣವು ಸಂಪೂರ್ಣ ಮಂಜಿನಿಂದ ತುಂಬಿತ್ತು. ಜನತೆ ಚಳಿಯಿಂದಾಗಿ ಪರದಾಡುವ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 8ಗಂಟೆಯಾದರೂ ಸೂರ್ಯನ ದರ್ಶನವಿಲ್ಲದೇ ಚುಮು ಚುಮು ಚಳಿಯ ನಡುವೆ ರಜೆ ದಿನ ಭಾನುವಾರ ಕಳೆಯುವಂತಾಗಿತ್ತು.

ಮೈ ಕೊರೆಯುವ ಚಳಿಯಿಂದಾಗಿ ಬೆಳಗ್ಗೆ 8.30ರವರೆಗೂ ಪಟ್ಟಣದಲ್ಲಿ ಜನರ ಓಡಾಟ ಕಡಿಮೆಯಿತ್ತು. ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ವಾಯುವಿಹಾರ, ಜಾಗಿಂಗ್‌ ಮಾಡುವವರು ಸಂಖ್ಯೆ ವಿರಳವಾಗಿತ್ತು. ದಟ್ಟ ಮಂಜಿನ ವಾತಾವರಣದ ನಡುವೆಯೂ ವಿದ್ಯಾರ್ಥಿಗಳು, ಯುವಕರು ಕ್ರಿಕೆಟ್‌, ಫುಟ್‌ಬಾಲ್‌ ಆಡುವುದರಲ್ಲಿ ನಿರತರಾಗಿದ್ದ ದೃಶ್ಯ ಕಂಡು ಬಂದಿತು.

ಎಎಸ್‌ಬಿ ಮೈದಾನದಲ್ಲಿ ಪುಟಾಣಿಗಳು ಮಂಜಿನ ನಡುವೆಯೂ ಕರಾಟೆ ಅಭ್ಯಾಸ ಮಾಡುತ್ತಿದ್ದರು.

ಭಾನುವಾರ ಪಟ್ಟಣದ ಪ್ರಮುಖ ರಸ್ತೆಗಳು ಮಂಜು ಕವಿದ ವಾತಾವರಣದಿಂದಾಗಿ ಮಬ್ಬಾಗಿತ್ತು. ಬೆಳಗ್ಗೆ ಸುಮಾರು 8.30ರವರೆಗೂ ಮಂಜಿನ ವಾತಾವರಣವಿತ್ತು. ಬೆಳಗಾದರೂ ರಸ್ತೆ ಕಾಣದಂತಾಗಿತ್ತು.

ಆನೇಕಲ್‌ನಲ್ಲಿ ದಟ್ಟವಾಗಿ ಕವಿದಿರುವ ಮಂಜಿನ ನಡುವೆಯೇ ವಿದ್ಯಾರ್ಥಿಗಳ ಕಸರತ್ತು
ಆನೇಕಲ್‌ನಲ್ಲಿ ದಟ್ಟವಾಗಿ ಕವಿದಿರುವ ಮಂಜಿನ ನಡುವೆಯೇ ವಿದ್ಯಾರ್ಥಿಗಳ ಕಸರತ್ತು
ಆನೇಕಲ್‌ ಎಎಸ್‌ಬಿ ಮೈದಾನದಲ್ಲಿ ದಟ್ಟ ಮಂಜಿನ ನಡುವೆ ಕರಾಟೆ ಅಭ್ಯಾಸದಲ್ಲಿರುವ ವಿದ್ಯಾರ್ಥಿಗಳು
ಆನೇಕಲ್‌ ಎಎಸ್‌ಬಿ ಮೈದಾನದಲ್ಲಿ ದಟ್ಟ ಮಂಜಿನ ನಡುವೆ ಕರಾಟೆ ಅಭ್ಯಾಸದಲ್ಲಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT