ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಮಾನ ನಿಲ್ದಾಣ | ಚಾಕೊಲೇಟ್‌ ಕವರ್‌ನಲ್ಲಿ ₹7.76 ಕೋಟಿಯ ವಜ್ರ ವಶ

ವಜ್ರ ಕಳ್ಳಸಾಗಣೆ ಜಾಲ ಭೇದಿಸಿದ ಅಧಿಕಾರಿಗಳು* ಚಿಕ್ಕಬಳ್ಳಾಪುರದ ಇಬ್ಬರು ಆರೋಪಿಗಳ ಬಂಧನ
Published 14 ಜನವರಿ 2024, 0:30 IST
Last Updated 14 ಜನವರಿ 2024, 0:30 IST
ಅಕ್ಷರ ಗಾತ್ರ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹7.76 ಕೋಟಿ ಮೌಲ್ಯದ 8,053 ಕ್ಯಾರೆಟ್‌ ತೂಕದ ವಜ್ರಗಳು, ₹4.62 ಲಕ್ಷ ಮೊತ್ತದ ಅಮೆರಿಕ ಡಾಲರ್‌ ಮತ್ತು ದಿರ್‌ಹಂ ಕರೆನ್ಸಿ ವಶ ಪಡಿಸಿಕೊಳ್ಳಲಾಗಿದೆ. 

ಕಳ್ಳಸಾಗಣೆ ಮಾಡಲು ಯತ್ನಿಸಿದ ಚಿಕ್ಕಬಳ್ಳಾಪುರದ ಇಬ್ಬರು ಪ್ರಯಾಣಿಕರನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬುಧವಾರ (ಜ.10) ಬಂಧಿಸಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ವಜ್ರಗಳನ್ನು ತಂದಿದ್ದ ಈ ಇಬ್ಬರೂ ಅವನ್ನು ಚಾಕೊಲೇಟ್‌ ಪ್ಯಾಕ್‌ನಲ್ಲಿ ಬಚ್ಚಿಟ್ಟು ದುಬೈಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ಸುಳಿವು ದೊರೆತಿತ್ತು. ರನ್‌ ವೇ ಬೇಯಲ್ಲಿ ದುಬೈಗೆ ಹಾರಲು ಸಿದ್ಧವಾಗಿದ್ದ ವಿಮಾನದಲ್ಲಿ ಅಧಿಕಾರಿಗಳ ತಂಡ ತಪಾಸಣೆ ನಡೆಸಿದಾಗ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಾಕೊಲೇಟ್‌ ಪ್ಯಾಕ್‌ನಲ್ಲಿ ಅಡಗಿಸಿ ಇಡಲಾಗಿದ್ದ ವಜ್ರಗಳು ಪತ್ತೆಯಾಗಿವೆ.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೈದರಾಬಾದ್‌ ವಿಮಾನ ನಿಲ್ದಾಣದಿಂದ ಕಳ್ಳ ಸಾಗಣೆ ಜಾಲದ ಮತ್ತಿಬ್ಬರು ಸದಸ್ಯರು ಇನ್ನಷ್ಟು ವಜ್ರಗಳನ್ನು ದುಬೈಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

ತಕ್ಷಣ ಅಧಿಕಾರಿಗಳು ಹೈದರಾಬಾದ್‌ ಗುಪ್ತಚರ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದಾರೆ. ಅದೇ ದಿನ ಬೆಳಗ್ಗೆ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ₹6.03 ಕೋಟಿ ಬೆಲೆಬಾಳುವ ವಜ್ರಗಳು ಹಾಗೂ ₹9.83 ಲಕ್ಷ ಮೊತ್ತದ ಅಮೆರಿಕ ಡಾಲರ್‌ ಕರೆನ್ಸಿ ವಶ ಪಡಿಸಿಕೊಂಡಿದ್ದಾರೆ. ವಜ್ರ ಕಳ್ಳ ಸಾಗಣೆ ಜಾಲದ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಚಾಕೊಲೇಟ್‌ ಪ್ಯಾಕೆಟ್‌ನಲ್ಲಿ ಅಡಗಿಸಿಟ್ಟ ವಜ್ರ 
ಚಾಕೊಲೇಟ್‌ ಪ್ಯಾಕೆಟ್‌ನಲ್ಲಿ ಅಡಗಿಸಿಟ್ಟ ವಜ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT