ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ:‌ ಜಿಲ್ಲಾ ಯುವ ಉತ್ಸವಕ್ಕೆ ಚಾಲನೆ

Published 17 ಸೆಪ್ಟೆಂಬರ್ 2023, 14:10 IST
Last Updated 17 ಸೆಪ್ಟೆಂಬರ್ 2023, 14:10 IST
ಅಕ್ಷರ ಗಾತ್ರ

ದೇವನಹಳ್ಳಿ:‌ ದೇಶದ‌ ಭವಿಷ್ಯ ಯುವ ಸಮುದಾಯದಲ್ಲಿ ಶ್ರಮದಲ್ಲಿ ಅಡಗಿದ್ದು, ಅವರಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ ಭಾವನೆ ಮೂಡಿಸುವ ಕೆಲಸಗಳು ನಡೆಯಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಯುವ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರ‌ ಪ್ರತಿಭೆ ಅನಾವರಣಕ್ಕೆ ಈ ಉತ್ಸವವೂ ವೇದಿಕೆಯಾಗಿದ್ದು, ಪ್ರತಿಭಾ ಪ್ರದರ್ಶನಗಳಿಂದ ವಿಶ್ವ ಮಟ್ಟಕ್ಕೆ ಹೆಸರುವಾಸಿಯಾಗಿ, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ನಿಮ್ಮ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳಲಿ ಎಂದು ಆಶಿಸಿದರು.

ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಮಾತನಾಡಿ, ಯುವಕರಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸಿದರೇ ದೇಶ ಕಟ್ಟುವ ಕೆಲಸ ಸುಲಭವಾಗುತ್ತದೆ. ಸಾಂಸ್ಕೃತಿಕತೆ‌ ಹೆಚ್ಚಾದರೇ ವೈವಿಧ್ಯಮಯವಾಗಿ ಸಮಾಜದಲ್ಲಿ ಸಾಧನೆ ಮಾಡಲು‌‌ ರಹದಾರಿಯಾಗುತ್ತದೆ. ವಿದ್ಯಾರ್ಥಿದೆಸೆಯಿಂದಲೇ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕ್ರೀಡಾ ಸಚಿವಾಲಯದ ಅಧಿಕಾರಿ‌ ಎಂ.ಎನ್.ನಟರಾಜ್, ಗಾಂಧಿ ಸ್ಮಾರಕ ನಿಧಿಯ ಇಂದಿರಾ ಕೃಷ್ಣಪ್ಪ, ಕಾಲೇಜಿನ ಪ್ರಾಂಶುಪಾಲ‌ ಡಿ.ಮಂಜಯ್ಯ, ದೈಹಿಕ‌ ಶಿಕ್ಷಕ ಕೆ.ಕೆ.ರವಿಚಂದ್ರ, ಜಿಲ್ಲಾ ಯುವ ಅಧಿಕಾರಿ‌ ಎ.ನಾಗಲಕ್ಷ್ಮೀ, ಸುಂದರಮ್ಮ,‌ ವಿ.ಪ್ರಶಾಂತ್, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT