ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ ಸ್ಕ್ಯಾನ್‌, ಎಕ್ಸ್‌ರೇಗೆ ಹೆಚ್ಚಿನ ಹಣ ಪಡೆದರೆ ಶಿಸ್ತು ಕ್ರಮ: ಎಚ್ಚರಿಕೆ

ಸಿ.ಟಿ ಸ್ಕ್ಯಾನ್‌ ಕೇಂದ್ರಕ್ಕೆ ಕ್ಷ-ಕಿರಣ ವಿಕಿರಣ ಸುರಕ್ಷತಾ ಉಪ ನಿದೇಶಕ ಭೇಟಿ
Last Updated 10 ಜೂನ್ 2021, 5:17 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಸೇರಿದಂತೆ ನಗರ ಹೊರವಲಯದಲ್ಲಿರುವ ಸಿ.ಟಿ ಸ್ಕ್ಯಾನ್ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರಗಳನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಕ್ಷ ಕಿರಣ- ವಿಕಿರಣಾ ಸುರಕ್ಷತಾ ಉಪ ನಿರ್ದೇಶಕ ಕೆ.ಎಸ್.ರಾಜೇಶ್ ನೇತೃತ್ವದ ತಂಡ ಸ್ಕ್ಯಾನಿಂಗ್ ಕೇಂದ್ರಗಳಿಗೆದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್-19 ಸೋಂಕು ಪತ್ತೆಹಚ್ಚುವುದಕ್ಕಾಗಿ ಎಚ್‌ಆರ್‌ ಸಿ.ಟಿ ಸ್ಕ್ಯಾನ್ ಪರೀಕ್ಷೆಗಾಗಿ ಸರ್ಕಾರ ಬಿಪಿ‌ಎಲ್ ಕಾರ್ಡ್ ಇರುವವರಿಗೆ ಎಲ್ಲಾ ಶುಲ್ಕ ಸೇರಿ ₹1,500 ಮತ್ತು ಇತರೆ ವರ್ಗದ ಜನರಿಗೆ ₹2,500 ಹಾಗೂ ಚೆಸ್ಟ್ ಎಕ್ಸರೇಗಳಿಗೆ ₹250 ಮಾತ್ರ ಪಡೆಯಲು ಸರ್ಕಾರ ಆದೇಶ ಮಾಡಿದೆ.

ಕೋವಿಡ್ ಸಂಕಷ್ಟದ ಸಮಯದಲ್ಲೂ ತಾಲ್ಲೂಕಿನ ಬಹುತೇಕ ಸಿ.ಟಿ.ಸ್ಕ್ಯಾನಿಂಗ್ ಕೇಂದ್ರಗಳು ಹಗಲು ದರೋಡೆ ನಡೆಸುತ್ತಿವೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿದ್ದಾರೆ. ಇಂತಹ ಸಿ.ಟಿ ಸ್ಕ್ಯಾನ್ ಕೇಂದ್ರಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಜಿಲ್ಲಾ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಪ್ರಧಾನ ಕಾರ್ಯದರ್ಶಿ ಚುಂಚೇಗೌಡನಹೊಸಹಳ್ಳಿಹನುಮಂತರಾಯಪ್ಪ ದೂರು ನೀಡಿದ್ದರು.

ನಗರದ ವಿವಿಧ ಸ್ಕ್ಯಾನಿಂಗ್ ಕೇಂದ್ರದವರು ಸಾರ್ವಜನಿಕರಿಗೆ ಸಿ.ಟಿ.ಸ್ಕ್ಯಾನ್ ಪರೀಕ್ಷೆಗಾಗಿ ಬಿಲ್ಲುಗಳನ್ನು ಸಹ ನೀಡುತ್ತಿಲ್ಲ ಎಂಬ ಮಾಹಿತಿ ದಾಖಲೆಗಳು ಮತ್ತು ಸ್ಥಳದಲ್ಲಿ ಲಭ್ಯವಿದ್ದ ರೋಗಿಗಳಿಂದ ಸ್ಥಳದಲ್ಲೆ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡರು.

ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕೇಂದ್ರಗಳ ಮೇಲೆ ಕೆಪಿಎಂಇ ಕಾಯ್ದೆಯಡಿ ನೋಟಿಸ್ ನೀಡಲಾಗಿದ್ದು, ಸದ್ಯದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೆ ಇದ್ದಲ್ಲಿ ಎನ್‌ಡಿಎಂಎ ಕಾಯ್ದೆ ಮತ್ತು ಎಪಿಡೆಮಿಕ್ ಡಿಸ್ಟಾರ್ ಕಾಯ್ದೆಯಡಿ ಕೇಂದ್ರವನ್ನು ಮುಚ್ಚಲು ಮತ್ತು ಶಿಕ್ಷೆಗೆ ಒಳಪಡಿಸಲು ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಕ್ಷ ಕಿರಣ ಉಪ ನಿರ್ದೇಶಕ ಕೆ.ಎಸ್.ರಾಜೇಶ್ ತಿಳಿಸಿದರು.

ಅಧಿಕಾರಿಗಳಾದ ಶಿವಕುಮಾರ, ಎಂ.ಆರ್.ರಾಮಚಂದ್ರರೆಡ್ಡಿ, ಡಾ.ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT