ದೊಡ್ಡಬಳ್ಳಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ ಹಾಗೂ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ವಿದ್ಯುತ್ ಅಪಘಾತ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ವಿದ್ಯುತ್ ಮಾರ್ಗಗಳ ಕಾರಿಡಾರ್ನಲ್ಲಿ ಮನೆಗಳನ್ನು ನಿರ್ಮಾಣ ಮಾಡಬಾರದು, ವಿದ್ಯುತ್ ಗೋಪುರ ಮತ್ತು ಕಂಬಗಳಿಗೆ ಬ್ಯಾನರ್, ಯಾವುದೇ ತರಹದ ಕೇಬಲ್, ಜಾನುವಾರು, ಬಟ್ಟೆ ಒಣಗಿಸಲು ಹಾಕುವುದಾಗಲಿ, ವಿದ್ಯುತ್ ಮಾರ್ಗಗಳ ಹತ್ತಿರದಲ್ಲಿ ಗಾಳಿಪಟವನ್ನು ಹಾರಿಸುವುದಾಗಲಿ, ವಿದ್ಯುತ್ ಗೋಪುರಗಳ ಸುತ್ತಲೂ ಮಣ್ಣನ್ನು ತೆಗೆಯುವುದಾಗಲಿ ಮಾಡದಂತೆ ಕೆಪಿಟಿಸಿಎಲ್ ಅಧಿಕಾರಿಗಳು ತಿಳುವಳಿಕೆ ನೀಡಿದರು.

ವಿದ್ಯುತ್ ಸಂಬಂಧಿತ ಕೆಲಸಗಳನ್ನು ಬೆಸ್ಕಾಂ ವತಿಯಿಂದ ಅಧಿಕೃತ ಪರವಾನಿಗಿ ಪಡೆದಿರುವರಿಂದ ಮಾತ್ರ ಮಾಡಿಸಬೇಕು. ಮಣ್ಣಿನ ಕೆಲಸಗಳನ್ನು ಮಾಡಿಸುವಾಗ ಭೂಗತ ಕೇಬಲ್ಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ನೀಡಿದರು.

ಜಾಗೃತಿ ಕಾರ್ಯಕ್ರಮದಲ್ಲಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾ, ಪಿಡಿಒ ಶಿವರಾಜ್, ಕಸಬಾ ವಿಎಸ್ಎಸ್ಎನ್ ನಿರ್ದೇಶಕ ಜೆ.ವೈ.ಮಲ್ಲಪ್ಪ, ಕೆಪಿಟಿಸಿಎಲ್ ದೊಡ್ಡಬಳ್ಳಾಪುರ ಟಿಎಲ್ಎಂ ಉಪವಿಭಾಗದ ಎಇಇ ಉಷಾ, ಟಿಎಕ್ಯೂ ವಿಭಾಗದ ಎಇಇ ಅಂಭಿಕಾ, 220 ಕೆ.ವಿ ಸ್ವೀಕರಣಾ ಕೇಂದ್ರದ ಎಇಇ ಅಜೀತ್ಕುಮಾರ್, ಚಿಕ್ಕಬಳ್ಳಾಪುರ ನೋಡಲ್ ಕೇಂದ್ರದ ಎಇಇ ಲಕ್ಷ್ಮೀನಾರಾಯಣ, ನಾಗಮಣಿ,ನಟರಾಜು, ನಾಗರಾಜು, ಪ್ರಕಾಶ್, ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.