ತಂದೆ ನಿಧನರಾಗಿದ್ದು, ಅಕ್ಕ ಮತ್ತು ತಾಯಿಯೊಂದಿಗೆ ವಿದ್ಯಾನಗರದಲ್ಲಿ ಭರತ್ ಕುಮಾರ್ ವಾಸವಿದ್ದರು. ಬೆಂಗಳೂರಿನ ಸಂಬಂಧಿಕರ ಕಾರ್ಯಕ್ರಮಕ್ಕೆ ಭಾನುವಾರ ಅಕ್ಕ ಮತ್ತು ತಾಯಿ ತೆರಳಿದ್ದಾಗ ಮನೆಯಲ್ಲಿ ನೇಣು ಬಿಗಿದು ಕೊಂಡಿದ್ದಾರೆ.
‘ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ದೊಡ್ಡ ಸೋಲಿಗೆ ನಾನೇ ಕಾರಣ’ ಎಂದು ಡೆತ್‌ನೋಟ್ ಬರೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.