ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಡಿ.ಕ್ರಾಸ್ ಸಮೀಪದ ಅರಣ್ಯಕ್ಕೆ ಬೆಂಕಿ

Published 25 ಏಪ್ರಿಲ್ 2024, 4:54 IST
Last Updated 25 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ಸಮೀಪದ ಹಿಂದೂಪುರ-ಬೆಂಗಳೂರು ರಾಜ್ಯದ ಹೆದ್ದಾರಿ ಬದಿಯಲ್ಲಿನ ಬೆಸ್ಕಾಂ ವಿದ್ಯುತ್‌ ವಿತರಣ ಕೇಂದ್ರದ ಸಮೀಪದ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಬೆಂಕಿ ಆವರಿಸಿದ್ದರಿಂದ ರಸ್ತೆಯಲ್ಲಿ ಹೋಗುವ ವಾಹನ ಸವಾರು ಪರದಾಡಿದರು.

ಬೆಂಕಿ ಆವರಿಸಿರುವ ಪ್ರದೇಶದ ರಸ್ತೆಯುದ್ದಕ್ಕೂ ತಾಲ್ಲೂಕಿನ ಪ್ರಮುಖ ವಿದ್ಯುತ್‌ ವಿತರಣಾ ಕೇಂದ್ರ, ನಗರ ಪೊಲೀಸ್‌ ಠಾಣೆ,ಕೃಷಿ ಇಲಾಖೆ ಹಾಗೂ ತಾಯಿ ಮಕ್ಕಳ ತಾಲ್ಲೂಕು ಆಸ್ಪತ್ರೆಯು ಸಹ ಇದ್ದು ಜನರಲ್ಲಿ ಆತಂಕವನ್ನು ಉಂಟು ಮಾಡಿತ್ತು.

ಬಿಸಿಲಿನ ತಾಪಕ್ಕೆ ಒಣಗಿದ ಹುಲ್ಲಿನ ಕಾರಣ ಬೆಂಕಿ ವೇಗವಾಗಿ ಹರಡಿದ್ದು,ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT