ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ದುರ್ಗಾಷ್ಟಮಿ ಮಹೋತ್ಸವ

ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ * ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
Last Updated 4 ಅಕ್ಟೋಬರ್ 2019, 13:51 IST
ಅಕ್ಷರ ಗಾತ್ರ

ವಿಜಯಪುರ: ಗಡ್ಡದನಾಯಕನಹಳ್ಳಿ ದುರ್ಗಾಮಹೇಶ್ವರಿ ದೇಗುಲದಲ್ಲಿ ನವರಾತ್ರಿ ಹಾಗೂ ದುರ್ಗಾಷ್ಟಮಿ ಮಹೋತ್ಸವ ಅಂಗವಾಗಿ ಅ.6ರಿಂದ ವಿಶೇಷ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಾಲಯದ ಪ್ರಧಾನ ಅರ್ಚಕ ನಾಗರಾಜಪ್ಪಸ್ವಾಮಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ದುರ್ಗಾಷ್ಟಮಿ ಅಂಗವಾಗಿ ಅ.6ರಂದು ಬೆಳಿಗ್ಗೆ ದೀಪಾರಾಧನೆ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿಪುಣ್ಯಾಹ, ದೇವನಾಂದಿ ರಕ್ಷಾಬಂಧನ, ಪಂಚಗವ್ಯ ಸ್ನಪನ ಕಳಶಸ್ಥಾಪನೆ, ಮಂಗಳಾರತಿ, ಸಭಾಗ್ನಿಕುಂಡದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಶ್ರೀದುರ್ಗಾಸಪ್ತಶತಿ ಪಾರಾಯಣ ಹಾಗೂ ಚಂಡಿಕಾಹೋಮ, ಮಹಾಪೂರ್ಣಾಹುತಿ, ದುರ್ಗಾಮಹೇಶ್ವರಿ ಅಮ್ಮನವರಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ದಿವ್ಯಾಲಂಕಾರ, ದಿವ್ಯದರ್ಶನ, ಅಷ್ಠಾವಧಾನ ಸೇವೆ ನಡೆಯಲಿದೆ.

ಬೆಳಿಗ್ಗೆ 10ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಅಂಬಾರಿ ಉತ್ಸ‌‌‌ವ ಹಾಗೂ ವೀರಭದ್ರಕುಣಿತ, ಕ್ಷೇತ್ರ ಧರ್ಮಸ್ಥಳ ಮಂಜುಳ ಮತ್ತು ತಂಡದವರಿಂದ ಡೋಲು ಕುಣಿತ ಆಯೋಜಿಸಲಾಗಿದೆ.

ಶೀಲಾನಾಯ್ಡು ಅವರಿಂದ ಕಥಾ ಕಾಲಕ್ಷೇಪ ಸಂಜೆ 4ಕ್ಕೆ, ಜೂನಿಯರ್ ಘಂಟಸಾಲ ಲಕ್ಷ್ಮೀಪತಿ ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮ‌ ಹಾಗೂ ರಾತ್ರಿ 7ಕ್ಕೆ ಉಡುಪಿ ಗಣೇಶ್‌ಭಟ್ ಅವರಿಂದ ಯಕ್ಷಗಾನ ಆಯೋಜಿಸಲಾಗಿದೆ.

ಅ.7ರಂದು ಮಹಾನವಮಿ ಅಂಗವಾಗಿ ಮುಂಜಾನೆ 4ಕ್ಕೆ ಬ್ರಾಹ್ಮಿಮೂಹೂರ್ತದಲ್ಲಿ ದೀಪಾರಾಧನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹ, ಕಳಶಾರಾಧನೆ, ಮಂಗಳಾರತಿ, ಸಭಾಗ್ನಿಕುಂಡದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಲಲಿತ ಸಹಸ್ರನಾಮ ಹೋಮ, ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಅಮ್ಮನವರ ಪಲ್ಲಕ್ಕಿ ಉತ್ಸವ, ವೀರಭದ್ರಸ್ವಾಮಿ ಕುಣಿತ, ಕಥಾ ಕಾಲಕ್ಷೇಪ, ಸಂಜೆ 4ಕ್ಕೆ ಎಂ.ವಿ.ನಾಯ್ಡು ತಂಡದಿಂದ ಭಕ್ತಿಗೀತೆಗಳು, ರಾತ್ರಿ 9ಕ್ಕೆ ‘ಕೃಷ್ಣ ರಾಯಭಾರ’ ಪೌರಾಣಿಕ ನಾಟಕ ಆಯೋಜಿಸಲಾಗಿದೆ.

ಅ.8ರಂದು ವಿಜಯದಶಮಿ ಅಂಗವಾಗಿ ದೀಪಾರಾಧನೆ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿಪುಣ್ಯಾಹ, ದೇವನಾಂದಿ ರಕ್ಷಾಬಂಧನ, ಕಳಶಸ್ಥಾಪನೆ, ಮಂಗಳಾರತಿ, ದುರ್ಗಾಪಾರಾಯಣ ಗಣಹೋಮ, ನವಗ್ರಹ ಹೋಮ, ದುರ್ಗಾಹೋಮ, ಪಂಚಾಮೃತ ಅಭಿಷೇಕ, ದಿವ್ಯಾಲಂಕಾರ, ದಿವ್ಯದರ್ಶನ, ಪಲ್ಲಕ್ಕಿ ಉತ್ಸವ, ವೀರಭದ್ರಕುಣಿತ, ಭರತ ನಾಟ್ಯ, ವಿವೇಕಾನಂದ ಬಳಗದವರಿಂದ ದುರ್ಗಾ ಮಹೇಶ್ವರಿ ಲೀಲಾ ವೈಭವ ಗಾನ ಕಥಾಮಾಲಿಕ ಸಂಜೆ 7ಕ್ಕೆ, ಪರಿವರ್ತನಾ ಕಲಾ ತಂಡದಿಂದ ನಾಟಕ ಮತ್ತು ಗೀತಗಾಯನ ಕಾರ್ಯಕ್ರಮ ನಡೆಯಲಿದೆ.

ಭಕ್ತರೇ ಸೇವಾಕರ್ತರು : ಈ ದೇವಾಲಯಕ್ಕೆ ಭಕ್ತರೇ ಸೇವಾಕರ್ತರಯ. ವಿಶೇಷ ‍ಪೂಜೆ ಸಂದರ್ಭದಲ್ಲಿ ದಾನ – ಧರ್ಮ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT