ನಾವು ಕೆಲಸ ಬಿಟ್ಟು ಪಂಚಾಯಿತಿಗೆ ಬರುತ್ತೇವೆ. ಆದರೆ ತಂತ್ರಾಂಶ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ. ತಿಂಗಳಾದರೂ ಖಾತೆ ಸಿಕ್ಕಿಲ್ಲ
ಮಧುಸೂದನ್ ಅರ್ಜಿದಾರ
ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಇ–ಸ್ವತ್ತು 2.0 ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ದೇವನಹಳ್ಳಿ ತಾಲ್ಲೂಕು ಪಂಚಾಯಿತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಕುಂದಾಣ ಚನ್ನರಾಯಪಟ್ಟಣ ಕಸಬಾ ಮತ್ತು ವಿಜಯಪುರ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾರ್ವಜನಿಕರು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ವಿದ್ಯಾ ಮೊ. 9972911656 ಪಿಡಿಒ ಪ್ರಕಾಶ್ ಮೊ.6363288040 ಅನ್ನು ಸಂಪರ್ಕಿಸಬಹುದು