ಶುಕ್ರವಾರ, ಡಿಸೆಂಬರ್ 4, 2020
22 °C

ದೇವನಹಳ್ಳಿ‌: ಎಂಪಿಸಿಎಸ್‌ಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ‌: ಇಲ್ಲಿನ ಬೊಮ್ಮವಾರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕ ಸೋಮಶೇಖರ್ ಮಾತನಾಡಿ, 2014ರ ಜ. 24ರಿಂದ ಪ್ರಸಕ್ತ ಚುನಾವಣೆವರೆಗೆ ಡೇರಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಇದೇ ಮೊದಲ ಬಾರಿಗೆ ಸರ್ವಸದಸ್ಯರ ಸಭೆಯಲ್ಲಿ ಒಮ್ಮತದ ಆಯ್ಕೆಗೆ ತೀರ್ಮಾನ ಮಾಡಲಾಗಿತ್ತು. ಮೀಸಲಾತಿ ಅನ್ವಯ ಎಸ್‌ಟಿ ಸ್ಥಾನ ಹೊರತುಪಡಿಸಿ ಇತರೆ ಪ್ರವರ್ಗಗಳಿಂದ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದವರ ಮನವೊಲಿಸಿ ಅವರೇ ಬೆಂಬಲ ಸೂಚಿಸಿದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಸಂಘದಲ್ಲಿ 285 ಸದಸ್ಯರಿದ್ದಾರೆ. ಪ್ರತಿದಿನ ಸರಾಸರಿ ಒಂದು ಸಾವಿರ ಲೀಟರ್ ಹಾಲು
ಉತ್ಪಾದನೆಯಾಗುತ್ತಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.

ಆಯ್ಕೆಯಾದ ನಿರ್ದೇಶಕರು: ರವಿಕುಮಾರ್, ಸೋಮಶೇಖರ್, ಎಸ್. ರಾಮಾಂಜಿನಪ್ಪ, ನಂಜೇಗೌಡ, ಮುನಿನಾರಾಯಣಪ್ಪ, ಬಿ.ಎನ್. ನಾರಾಯಣಪ್ಪ, ಬಿ.ಎಚ್. ನಾರಾಯಣಸ್ವಾಮಿ, ನರಸಿಂಹಪ್ಪ, ಅಚ್ಚಪ್ಪ, ಭಾಗ್ಯಮ್ಮ, ದ್ಯಾವಮ್ಮ, ಶಕುಂತಲಾ ಆಯ್ಕೆಯಾಗಿದ್ದಾರೆ. 

ಚುನಾವಣಾಧಿಕಾರಿಯಾಗಿ ಶಂಷದ್ ತಬರೆಜ್ ಕರ್ತವ್ಯ ನಿರ್ವಹಿಸಿದರು. ಮುಖಂಡರಾದ ಬಿ.ಕೆ. ದಿನಕರ್, ರಾಯಣ್ಣ, ಸಹದೇವ್, ಮೂರ್ತಿ, ನಟರಾಜ್‌, ಬಾಲಮುರಳಿ, ನಾಗೇಶ್, ರಾಘವೇಂದ್ರ, ಚಿಕ್ಕಪಾಪಯ್ಯ, ಮುನೇಗೌಡ, ಗಂಗಾಧರ್, ವೆಂಕಟಾಚಲ, ಬಿ.ಜೆ. ನಾಗರಾಜ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.