ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ: ಆರ್‌ಡಿಪಿಆರ್ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಆಯ್ಕೆ

Published : 3 ಆಗಸ್ಟ್ 2024, 15:22 IST
Last Updated : 3 ಆಗಸ್ಟ್ 2024, 15:22 IST
ಫಾಲೋ ಮಾಡಿ
Comments

ಹೊಸಕೋಟೆ: ತಾಲ್ಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಅಧಿಕಾರಿ ಮತ್ತು ನೌಕರರ ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ತಾಲ್ಲೂಕಿನ ಜಡಿಗೇನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಜಣ್ಣ ಆಯ್ಕೆಯಾಗಿದ್ದಾರೆ.

ಸಂಘದ ಗೌರವಾಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಇ.ಒ ಸಿ.ಎನ್.ನಾರಾಯಣಸ್ವಾಮಿ, ಗೌರವ ಸಲಹೆಗಾರರಾಗಿ ನರೇಗಾ ಎಡಿ ಮೊಹಮೂಬ್ ಪಾಷ, ಉಪಾಧ್ಯಕ್ಷರಾಗಿ ರಮೇಶ್, ಕಾಂತಮ್ಮ, ಖಜಾಂಚಿಯಾಗಿ ಬಾಲಜಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮೇಗೌಡ, ಕಾರ್ಯದರ್ಶಿಯಾಗಿ ಶ್ವೇತಾ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ, ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಶಂಕರಮ್ಮ, ಅನುಸೂಯ, ಶ್ರೀನಿವಾಸ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪದ್ಮ, ಮಂಜುನಾಥ, ಮಂಜುನಾಥ ಖಾಜಿ ಹೊಸಹಳ್ಳಿ ಆಯ್ಕೆ ಮಾಡಲಾಗಿದೆ.

ಪಿಡಿಒ ಸಂಘದ ಅಧ್ಯಕ್ಷ, ಖಾಜಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವನಗೊಂದಿ ಗ್ರಾಮ ಪಂಚಾಯಿತಿಯ ಪಿಡಿಒ ಡಿ.ಹರೀಶ್, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಬಸವರಾಜು, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು ಆಯೇಷಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT