ಸೂಲಿಬೆಲೆ (ಹೂಸಕೋಟೆ): ಭೂಮಿಯ ತಾಪಮಾನ ದಿನೇ ದಿನೇ ಹೆಚ್ಚಳವಾಗುತ್ತಿದೆ. ಭೂಮಿ ಮೇಲೆ ಜೀವರಾಶಿಗಳು ನಿರಾಳವಾಗಿ ಜೀವಿಸಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡುವುದು ಕರ್ತವ್ಯವೆಂದು ಭಾವಿಸಬೇಕು ಎಂದು ಸೂಲಿಬೆಲೆಯ ಹಿರಿಯ ಮುಖಂಡ ಬಿ.ಎನ್.ಗೋಪಾಲಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಮದ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಏಕ್ ಪೆಡ್ ಮಾ ಕೆ ನಾಮ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ಕಾಳಜಿ ಬೆಳಸಿಕೊಳ್ಳಬೇಕು. ಅಬ್ದುಲ್ ಕಲಾಂರಂತೆ ಸರಳವಾಗಿ ಜೀವಿಸಿ ಎಲ್ಲರೂ ಸಮಾಜದ ಆಸ್ತಿಗಳಾಗಬೇಕು. ಜತೆಗೆ ಸಾಮಾಜಿಕ ಕಾಳಜಿಯುಳ್ಳ ವಿಶ್ವಮಾನವನಾಗಬೇಕು ಎಂದರು.

ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಶಶಿಕಲಾ ಮಾತನಾಡಿ, ಕೇಂದ್ರ ಸರ್ಕಾರದ ಮೇರಾ ಯುವ ಭಾರತ್ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಅರ್ಪಣಾ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿ ಎಂದರು.

ವಸತಿ ಶಾಲೆಯ ಉಪನ್ಯಾಸಕ ಸೋಮನಾಥ್, ಕೃಷ್ಣ, ಸ್ನೇಹಪೂಜಾರ, ದಿವಾಕರರೆಡ್ಡಿ, ಸರ್ದಾರ್ ಅಹಮದ್, ಮಹೇಶ್, ಆಶಾ, ಶ್ವೇತಾ, ರಮೇಶ್, ಹರೀಶ್, ಶಬ್ಬೀರ್ಅಹಮ್ಮದ್, ಮಾಲಾ, ಸೌಮ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.