ಗುರುವಾರ , ಜನವರಿ 23, 2020
20 °C

ಪರಿಸರದ ಕೆಲಸಕ್ಕೆ ಜನರ ಸಹಭಾಗಿತ್ವ ಅವಶ್ಯ: ಮಂಜುನಾಥ್‌ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಪರಿಸರ ಮತ್ತು ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಸುಚೇತನ ಎಜುಕೇಷನಲ್ ಆಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೊಸಕೋಟೆ ತಾಲ್ಲೂಕಿನ ಪರಿಸರ ಪ್ರೇಮಿಗಳ ಸಂಘದ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದರು.

ಪರಿಸರ ಪ್ರೇಮಿಗಳ ತಂಡದ ಸದಸ್ಯರು ಗಾಂಧಿನಗರದಲ್ಲಿನ ಶ್ರೀಆದಿನಾರಾಯಣದೇವಾಲಯ, ಮುತ್ತೂರು ಕೆರೆ,ರಾಮಣ್ಣನ ಬಾವಿ, ಮುತ್ತೂರು ಕೆರೆ ಅಂಚಿನಲ್ಲಿನ ನೆಡುತೋಪು ಹಾಗೂ ಎಂ.ಎ.ಪ್ರಕಾಶ್ ಬಡಾವಣೆಯಲ್ಲಿರುವ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆ ವೀಕ್ಷಣೆ ಮಾಡಿದರು.

ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ಪರಿಸರ ಪೂರಕ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ. ಕೆರೆ ಅಭಿವೃದ್ಧಿ ಹಾಗೂ ಉದ್ಯಾನ ಅಭಿವೃದ್ಧಿಗೊಳಿಸಿದ ರೀತಿ ವಿವರಿಸಿದರು.

ಸುಚೇತನ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‌ ಗೌರವ ಅಧ್ಯಕ್ಷ ಮಂಜುನಾಥ್‌ನಾಗ್ ಮಾಹಿತಿ ನೀಡಿ, ಪರಿಸರದ ಕೆಲಸದ ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸಂಘದ ವತಿಯಿಂದ ಇದುವರೆಗೂ ಆಯೋಜಿಸಲಾಗಿರುವ ಕಾರ್ಯಾಗಾರ ಹಾಗೂ ಜಾಗೃತಿ ಬಗ್ಗೆ ವಿವರಿಸಿದರು.

ಹೊಸಕೋಟೆ ಪರಿಸರ ಪ್ರೇಮಿಗಳ ಸಂಘದ ಅಧ್ಯಕ್ಷ ಕೋಟೇಶ್ ಮಾತನಾಡಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಕೋಟೆಯಲ್ಲೂ ಇದೇ ಮಾದರಿಯಲ್ಲಿ ಜನರ ಸಹಭಾಗಿತ್ವದೊಂದಿಗೆ ಪರಿಸರದ ಪೂರಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ಸದಸ್ಯರಾದ ಜಿ.ರಾಜಶೇಖರ್, ರಾಜು, ಸುಚೇತನ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸುನಿಲ್, ಖಜಾಂಚಿ ಅನೀಲ್, ಸದಸ್ಯರಾದ ಪ್ರವೀಣ್, ಪ್ರದೀಪ್,ಶ್ರೀನಿವಾಸ್, ಪರಿಸರ ಪ್ರೇಮಿಗಳ ತಂಡದ ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪ್ರಸಾದ್ ಖಜಾಂಚಿ ಪ್ರಮೋದ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು