ನೆಲಮಂಗಲ: ಸಂವಿಧಾನ ಓದು ಅಭಿಯಾನ - ಕರ್ನಾಟಕ ಮತ್ತು ಹರ್ಷ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಫೆಬ್ರುವರಿ 28ರಂದು ಸಂವಿಧಾನದ ಕುರಿತು ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯ ವಿಜೇತರಿಗೆ ಪ್ರಥಮ ₹ 15,000, ದ್ವಿತೀಯ ₹ 10,000, ತೃತೀಯ ₹ 5,000, ತಲಾ ₹ 1,000 ಸಮಾಧಾನಕರ ಬಹುಮಾನವೂ ಇರಲಿದೆ.

ಈ ಸ್ಪರ್ಧೆಗೆ ಜಿಲ್ಲಾ ವ್ಯಾಪ್ತಿಯ ಒಂದು ಕಾಲೇಜಿನಿಂದ 5 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಸ್ಪರ್ಧಿಗಳು ಪ್ರಾಂಶುಪಾಲರ ದೃಢೀಕರಣ ಪತ್ರ ತರುವುದು ಕಡ್ಡಾಯ.

ಸ್ಪರ್ಧಿಗಳು, ಸಂವಿಧಾನ ಮತ್ತು ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಮಹಿಳೆ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆʼ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆಯಲು ಅವಕಾಶವಿದೆ.

ಆಸಕ್ತರು ಆಯೋಜಕರಾದ ಸಂಜಯ್ ಎಲ್.ಎ. (9606945415) ಹಾಗೂ ಬಿ.ರಾಜಶೇಖರಮೂರ್ತಿ (9448324727) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.