ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಟಿಕೆಟ್‌: ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯುವತಿ!

ಸ್ನೇಹಿತನ ಬಿಳ್ಕೋಡಲು ವಿಮಾನ ನಿಲ್ದಾಣ ಪ್ರವೇಶಿಸಿದ್ದ ಹರ್‌ಪ್ರೀತ್‌
Published 27 ನವೆಂಬರ್ 2023, 20:58 IST
Last Updated 27 ನವೆಂಬರ್ 2023, 20:58 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 1ಕ್ಕೆ ಸ್ನೇಹಿತನನ್ನು ಬಿಳ್ಕೋಡಲು ಭಾನುವಾರ ನಕಲಿ ಟಿಕೆಟ್‌ನೊಂದಿಗೆ ಬಂದಿದ್ದ ಯುವತಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಜಾರ್ಖಂಡ್‌ ಮೂಲದ ಹರ್‌ಪ್ರೀತ್‌ ಕೌರ್ ಸೈನಿ ತಮ್ಮ ಸ್ನೇಹಿತ ಆಯುಷ್ ಶರ್ಮಾ ಎಂಬುವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಹೋಗಲು ಬಂದಿದ್ದರು.

ಸಿಐಎಸ್ಎಫ್ ಭದ್ರತಾ ಸಿಬ್ಬಂದಿಗೆ ತಾನೇ ಸೃಷ್ಟಿಸಿದ್ದ ನಕಲಿ ಪಾಸ್ ತೋರಿಸಿ ಟರ್ಮಿನಲ್ 1ರ 5ಎ ದ್ವಾರದಿಂದ ಸ್ನೇಹಿತನೊಂದಿಗೆ ಒಳ ಪ್ರವೇಶಿಸಿದ್ದಾಳೆ.

ಭದ್ರತಾ ಸರದಿಯಲ್ಲಿದ್ದಾಗ ಟಿಕೆಟ್ ತೋರಿಸುತೆ ಭದ್ರತಾ ಸಿಬ್ಬಂದಿ ಸೂಚಿಸಿದಾಗ ಲ್ಯಾಪ್‌ಟಾಪ್‌ ಅನ್ನು ಟರ್ಮಿನಲ್ 1ರ ಹೊರಗಡೆ ಮರೆತು ಬಂದಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ‌.

ಆಕೆ ಬಳಿ ಇದ್ದ ದಾಖಲೆ ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂದು ಗೊತ್ತಾಗಿದೆ. ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಕಂಪ್ಯೂಟರ್‌ನಲ್ಲಿ ತಯಾರಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಯುವತಿಯನ್ನು ವಶಕ್ಕೆ ಪಡೆದ‌ ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 465, 471, 448 ಅಡಿ ವಂಚನೆಯ ಉದ್ದೇಶಕ್ಕೆ‌ ನಕಲಿ ದಾಖಲೆ ಸೃಷ್ಟಿ ಮತ್ತು ಅತಿಕ್ರಮ ಪ್ರವೇಶ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT