ವಿಜಯಪುರ: ‘ಹಿರಿಯರು ಬಿಟ್ಟು ಹೋಗಿರುವ ಭೂಮಿ ಕಿತ್ತುಕೊಳ್ಳುವ ಮೊದ್ಲು ನಮಗೆ, ನಮ್ಮ ಮಕ್ಕಳಿಗೆ ಒಂದಿಷ್ಟು ವಿಷ ಕೊಡಿ. ನಮ್ಮೆಲ್ಲರನ್ನೂ ಸಾಯಿಸಿದ ನಂತರ ಸರ್ಕಾರ ಭೂಮಿಯನ್ನು ತನಗೆ ಇಷ್ಟಬಂದಂತೆ ಮಾಡಿಕೊಳ್ಳಲಿ’ ಎಂದು ಅಸಹಾಯಕ ವೃದ್ಧೆಯರು ಅಳಲು ತೋಡಿಕೊಂಡರು.

ಚನ್ನರಾಯಪಟ್ಟಣ ಭಾಗದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಜಮೀನುಗಳಲ್ಲಿ ಕುಳಿತ ವೃದ್ಧ ಮಹಿಳೆಯರು ‘ಬದುಕಿಗೆ ಆಸರೆಯಾಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ’ ಎಂದು ಸವಾಲು ಹಾಕಿದರು.

‘ನಾವೆಲ್ಲರೂ ಬಡವರೇ. ನಮ್ಮ ಮಕ್ಕಳು ಯಾರೂ ಸರ್ಕಾರಿ ಅಧಕಾರಿಗಳಲ್ಲ. ರಾಜಕೀಯ ಮಾಡುವವರೂ ಅಲ್ಲ. ದಿನಬೆಳಗಾದರೆ ಈ ಕಷ್ಟಪಟ್ಟು ದುಡಿಯುವವರು. ನಾವೆಲ್ಲರೂ ಭೂಮಿತಾಯಿಯನ್ನೇ ನಂಬಿ ಬದುಕಿದ್ದೀವಿ.ಭೂಮಿಯನ್ನು ಕಿತ್ತುಕೊಂಡರೆ ಬಡವರು ಬದುಕುವುದು ಬೇಡವೇ?’ ಎಂದು ಮಟ್ಟಿಬಾರ್ಲು ವೃದ್ಧೆ ನರಸಮ್ಮ ಪ್ರಶ್ನಿಸಿದರು.

‘ನಮ್ಮ ಭೂಮಿ ಕಿತ್ತುಕೊಂಡರೆ ನಮ್ಮ ಮಕ್ಕಳು, ದನಕರುಗಳೊಂದಿಗೆ ಎಲ್ಲಿಗೆ ಹೋಗಬೇಕು? ಮನೆಮಠ ಬಿಟ್ಟು ನಾವು ಬದುಕೋದು ಎಲ್ಲಿ? ಬರೀ ಫ್ಯಾಕ್ಟರಿಗಳನ್ನು ಕಟ್ಟಿಬಿಟ್ಟರೆ ಸಾಕೇ? ಮನೆಯವರೆಯಲ್ಲೂ ಹೋಗಿ ಹೋರಾಟ ಮಾಡ್ತೀದ್ದಾರೆ. ಯಾಕೆ ಸುಮ್ಮನೆ ನಮ್ಮ ಅನ್ನ ಕಿತ್ತುಕೊಳ್ತೀರಿ.ಸರ್ಕಾರಿ ಭೂಮಿಗಳನ್ನು ಅನ್ಯಾಯವಾಗಿ ತಿಂದು ಹಾಕಿರೋರು ತುಂಬಾ ಜನ ಇದ್ದಾರೆ. ಆ ಭೂಮಿ ಕಿತ್ತುಕೊಳ್ಳಿ’ ಎಂದು ಸವಾಲು ಹಾಕಿದರು.

‘ಈ ಭೂಮಿ ನಮಗೆ ತಾಯಿ ಇದ್ದಂತೆ. ಹೊತ್ತು ಹುಟ್ಟಿ, ಹೊತ್ತು ಮುಳುಗೋವರೆಗೂ ನಮ್ಮ ಜೀವನವನ್ನು ಇದರಲ್ಲಿ ಕಳೆದಿದ್ದೀವಿ. ಸಾಯೋ ಸಮಯದಲ್ಲಿ ನಮಗೆ ಯಾಕೆ ಈ ಕೊರಗು ಕೊಟ್ಟಿದ್ದಾರೆ. ರಾತ್ರಿಯಾದರೆ ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲಿಕ್ಕೆ ಆಗ್ತಿಲ್ಲ. ಊಟ ಮಾಡಲಿಕ್ಕೆ ಆಗ್ತಿಲ್ಲ. ನಮ್ಮ ಪ್ರಾಣ ಹೋದ ಮೇಲೆಯಾದರೂ ಕಿತ್ತುಕೊಳ್ಳಿ. ನಾವು ಬದುಕಿರೋವರೆಗಾದರೂ ಭೂಮಿಯನ್ನು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಳ್ತೇನೆ. ಭೂಮಿ ಕೊಟ್ಟ ನಮ್ಮ ಸಂಬಂಧಿಕರು ಮನೆ ಹುಡುಗರಿಗೆ ಶೌಚಾಲಯ ಸ್ವಚ್ಚಗೊಳಿಸುವ ಕೆಲಸ ಕೊಟ್ಟಿದ್ದಾರೆ’ ಎಂದು ವೃದ್ಧೆ ಆಂಜಿನಮ್ಮ ಕಣ್ಣೀರು ಹಾಕಿದರು.

ರೋಗಗ್ರಸ್ತರಾಗುತ್ತಿರುವ ಜನರು: ‘ಕೆಐಎಡಿಬಿಯವರು ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಾರೆ ಎಂದು ಗೊತ್ತಾದ ದಿನದಿಂದ ಅನೇಕರು ಕಾಯಿಲೆ ಬಿದ್ದಿದ್ದಾರೆ. ಕೆಲವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಶುರುವಾಗಿದೆ. ತೋಟಕ್ಕೆ ಹೋದರೆ ಕಣ್ಣಲ್ಲಿ ನೀರು ಬರುತ್ತೆ. ಯಾವಾಗ ನಮ್ಮನ್ನು ಈ ಭೂಮಿಯಿಂದ ಹೊರಗೆ ಹಾಕ್ತಾರೋ ಎನ್ನುವ ಆತಂಕ ಕಾಡುತ್ತಿದೆ’ ಎಂದು ರೈತ ನಂಜೇಗೌಡ ಹೇಳಿದರು.

‘ಕಲ್ಲು ಮನಸ್ಸಿನ ಸರ್ಕಾರ ನಮ್ಮ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ. ಸರ್ಕಾರ ಹೀಗೆ ವರ್ತನೆ ಮುಂದುವರೆಸಿದರೆ ನಮ್ಮ ಪ್ರಾಣ ಬೇಕಾದರೂ ಬಿಡ್ತೀವಿ. ಭೂಮಿ ಕೊಡಲ್ಲ’ ಎಂದರು.

56 ದಿನ ಪೂರೈಸಿದ ಧರಣಿ: ಭೂಸ್ವಾಧಿನ ವಿರೋಧಿಸಿರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 57 ನೇ ದಿನಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.