ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಸ್ವಾಧಿನ ರದ್ದುಪಡಿಸುವಂತೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ವಿಭಾವಿದ್ಯಾರಾಥೋಡ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
ಹೋರಾಟ ಮುಂದುವರೆಯಲಿದೆ
ಫಲವತ್ತಾದ ಭೂಮಿ ಬಂಡವಾಳಶಾಹಿಗಳ ಕೈಸೇರುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನಗರವಾಸಿಗಳಿಗೆ ಹಣ್ಣು, ಮಾಂಸ, ಹಾಲು ನೀಡುವ ರೈತರ ಭೂಮಿಗೆ ಕನ್ನಹಾಕಲು ಸರ್ಕಾರ ಮುಂದಾಗಿದೆ. ಟೌನ್‌ಶಿಪ್ ನೆಪದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತ ವಿರೋಧಿ ನೀತಿಯ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ.
ಆರ್.ಪ್ರಸನ್ನ, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ
ಒಗ್ಗಟ್ಟಿನ ಹೋರಾಟ ಅಗತ್ಯ
ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ಸಾವಿರಾರು ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ವಂಶಪಾರಂಪರಗತವಾಗಿ ಬಂದ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಚನ್ನರಾಯಪಟ್ಟಣ ರೈತರು ಒಗ್ಗಟ್ಟಾಗಿ ಪ್ರಾಣ ಹೋದರು ಭೂಮಿ ನೀಡಲ್ಲ ಎಂಬ ಹೋರಾಟ ಮಾಡಿದ್ದರು. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು.
ಸಂಜೀವ್ ನಾಯಕ್, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ
ಭೂಸ್ವಾಧೀನ ಪ್ರಯತ್ನ ಖಂಡನೀಯ
ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಪ್ರಯತ್ನ ಖಂಡನೀಯ. ಗ್ರಾಮಾಂತರ ಜಿಲ್ಲೆಯ ಹೆಚ್ಚಿನ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ. ಅನ್ನ ಬೆಳೆಯುವ ರೈತರಿಗೆ ಭೂಮಿ ಇಲ್ಲದಂತಾಗುತ್ತಿದೆ. ಭೂಮಿ ಬೆಲೆ ಏರುತ್ತಿದ್ದಂತೆ ಮಾನವೀಯತೆಯ ಇಲ್ಲದೆ ರೈತರ ಭೂಮಿ ಕಬಳಿಸಲಾಗುತ್ತಿದೆ.