ದೇವನಹಳ್ಳಿ: ಪ್ರಕೃತಿ ಹಸಿರು ವಾತಾವರಣದಲ್ಲಿ ಭಜನೆ, ಧ್ಯಾನ ಮನಸ್ಸಿಗೆ ಶಾಂತರಸದ ಅನುಭವ ನೀಡುತ್ತದೆ. ತಿನ್ನಲು ಬಂದ ಗ್ರಾಹಕರಿಗೆ ಮೊಬೈಲ್ ಪ್ರಪಂಚ ಬಿಟ್ಟು, ಸಾಂಪ್ರದಾಯಿಕ ಆಟವಾಡಲು ಪ್ರೋತ್ಸಾಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸುತ್ತಿದೆ ಪಟ್ಟಣದ ಕೋಟೆ ಸಮೀಪದಲ್ಲಿರುವ ‘ಚಾಯ್ ಪಾರ್ಕ್’.
ವ್ಯಾಯಾಮಕ್ಕೆ, ಆಟಕ್ಕೆ, ಹರಟೆಗೆ ಇದು ನೆಚ್ಚಿನ ಸ್ಥಳವಾಗಿದ್ದು, ನಿತ್ಯ ಬೆಳಗ್ಗೆ ಮಟ್ಕಾ, ಮಸಾಲ ಪುಡಿ, ತುಪ್ಪದ ಇಡ್ಲಿ ಸೇರಿದಂತೆ ಮಸಾಲ ತಟ್ಟೆ ಇಡ್ಲಿ ವಿಶೇಷವಾಗಿದ್ದರೇ ಮಧ್ಯಾಹ್ನ ತುಪ್ಪದ ಹುಟ್ಟಿಗೆ ರೊಟ್ಟಿ, ಕಾಯಿ, ಬೆಳೆ, ಶೇಂಗಾ ಹೊಳಿಗೆಯ ಭಾರಿ ಭೋಜನ ಸಿಗುತ್ತದೆ.
ಇದು ಕೇವಲ ಹೊಟೇಲ್ ಮಾತ್ರವಲ್ಲದೇ ಧ್ಯಾನ ಕೇಂದ್ರವಾಗಿದ್ದು, ‘ಶ್ರೀ ರಾಮ ಜಯ ರಾಮ’ ಸ್ತ್ರೋತ್ರವೂ ನಿರಂತರವಾಗಿ ಪಠಣೆಯಾಗುತ್ತಿರುತ್ತದೆ. ದೈಹಿಕ ದೃಢತೆಗಾಗಿ ವ್ಯಾಯಾಮ ಮಾಡಬಹುದು. ವಿವಿಧ ರೀತಿಯ ಜರೋ ಬಂಡಿ, ಉಯ್ಯಾಲೆಯಂತಹ ಹೊರಾಂಗಣ ಆಟ, ಚೌಕಾ ಬಾರ, ಅಳುಗುಳಿ ಮನೆ ಸೇರಿದಂತೆ ಚೇಸ್, ಕ್ಯಾರೆಮ್, ಹಾವು ಏಣಿ ಆಟವೂ ಇಲ್ಲಿದೆ.
ಆಟವಾಡುತ್ತಾ, ಆಟುತ್ತಾ ಇಲ್ಲಿ ಸಿಗುವ ಉತ್ತರ ಭಾರತೀಯ ಖಾದ್ಯದಿಂದ ಹಿಡಿದು ಚೈನೀಸ್ ತಿನಿಸುಗಳು ಬಾಯನ್ನು ಚಪ್ಪರಿಸುವಂತೆ ಮಾಡುತ್ತದೆ. ಹರಟೆ ಸೇರಿರುವ ಹಿರಿಯರ ಗುಂಪಿಗಂತೂ ಮಸಾಲ, ಬ್ಲಾಕ್, ತುಲಸಿ, ಎಲೈಟ್, ತಂದೂರಿ, ಲೆಮೆನ್, ಶುಂಠಿ, ಚಾಕೊಲೇಟ್ ಸೇರಿದಂತೆ ತರಹೇವಾರಿ ಕಾಫಿ, ಟೀಗಳು ನಾಲಿಗೆಗೆ ಹಬ್ಬ ತರಿಸಲಿದ್ದು, ನೆಂಚಿಕೊಳ್ಳಲು ಸಾಲ್ಪೆಡ್, ಚೀಸೀ, ಪೆರಿ ಪೆರಿ ಪ್ರೈಸ್‌ಗಳು ಜತೆಯಾಗಲಿದೆ.
ಜಂಕ್ ಫುಡ್‌ನಿಂದ ದೂರ ಇರೋಣ, ಒಂದೆರೆಡು ಗಂಟೆ ಟ್ರೆಡ್ ಮಿಲ್‌ನಲ್ಲಿ ಮಾಡುವ ಆರೋಗ್ಯ ಕಾಳಜಿ ಇರುವವರಿಗಾಗಿಯೇ ಕಾಳುಗಳು, ಸೌತೆಕಾಯಿ, ಮೆಕ್ಕೆ ಜೋಳ, ಟೊಮೊಟೊ ಸಲಾಡ್ ಇದೆ. ಶಕ್ತಿವರ್ಧನೆಗಾಗಿ ಕಾಫಿಯೊಂದಿಗೆ ಈರುಳ್ಳಿ, ಚಿಲ್ಲಿ ಗಾರ್ಲಿಕ್, ಚೀಸ್ ಪಕೋಡ, ವಡಾಪಾವ್, ಮೊಮೊಸ್ ಸಹ ಇವರಲ್ಲಿ ಲಭ್ಯವಿದೆ.
ನಗರವಾಸಿಗಳು ಮಾರು ಹೋಗಿರುವ ಸ್ಮಾಂಡ್ವಿಚ್, ಬರ್ಗರ್, ಕ್ಲಾಸಿಕ್ ಪಿಜ್ಜಾ, ಮ್ಯಾಗೀಗಳು ಹತ್ತಾರು ತರಹೇವಾರಿಯ ರುಚಿಯಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.