14 ಕೆಜಿ ಗಾಂಜಾ ವಶ
ಹೊಸಕೋಟೆ: ಹೊಸಕೋಟೆ ಉಪವಿಭಾಗದ ಪೊಲೀಸರು ಇಲ್ಲಿಗೆ ಸಮೀಪದ 25 ಕಡೆ ದಾಳಿ ನಡೆಸಿ ಸುಮಾರು 14 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ಡಿವೈಎಸ್ ಪಿ ನಿಂಗಪ್ಪ ಸಕ್ರಿ ತಿಳಿಸಿದ್ದಾರೆ.
‘ಶುಕ್ರವಾರ ಬೆಳಗ್ಗೆ ಉಪವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳ ಹತ್ತು ತಂಡಗಳನ್ನು ರಚಿಸಿ ನಗರ ಹಾಗೂ ದಾಸರಹಳ್ಳಿಯ 25 ಸ್ಥಳಗಳಲ್ಲಿ ದಾಳಿ ನಡೆಸಲಾಯಿತು’ ಎಂದರು.
‘ನಗರದಲ್ಲಿ ಹತ್ತು ಕೆಜಿ ಹಾಗೂ ದಾಸರಹಳ್ಳಿಯಲ್ಲಿ ನಾಲ್ಕು ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ನಡೆಸಲಾಗುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.