ಗ್ರಾ.ಪಂ ಸದಸ್ಯರಾಗಿ ದಂಪತಿ ಆಯ್ಕೆ

ಆನೇಕಲ್: ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಪತಿ ಮತ್ತು ಪತ್ನಿ ಆಯ್ಕೆಯಾಗಿರುವುದು ವಿಶೇಷ.ಹಾರಗದ್ದೆ ಗ್ರಾ.ಪಂ ವ್ಯಾಪ್ತಿಯ ಲಿಂಗಾಪುರದಲ್ಲಿ ಗೀತಾ ರಮೇಶ್ ಮತ್ತು ಹಾರಗದ್ದೆ ಕ್ಷೇತ್ರದಿಂದ ರಮೇಶ್ ಚುನಾಯಿತರಾಗಿದ್ದಾರೆ. ಗೀತಾ ರಮೇಶ್ ಅವರು ಎರಡನೇ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ.
ಈ ಬಾರಿ ಪತಿ ರಮೇಶ್ ಆಯ್ಕೆಯಾಗುವ ಮೂಲಕ ದಂಪತಿ ಗ್ರಾಮ ಪಂಚಾಯಿತಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.