ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು: ಸುತ್ತಮುತ್ತ ಭರ್ಜರಿ ಮಳೆ

Published 22 ಜೂನ್ 2024, 13:59 IST
Last Updated 22 ಜೂನ್ 2024, 13:59 IST
ಅಕ್ಷರ ಗಾತ್ರ

ಕುದೂರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶನಿವಾರ ಸಂಜೆ ಧಾರಾಕಾರವಾಗಿ ಮಳೆ ಸುರಿಯಿತು.

ಸಂಜೆ 4:30ರ ಸುಮಾರಿಗೆ ಸಣ್ಣದಾಗಿ ಹನಿ ತೊಡಗಿದ ಮಳೆ ನಂತರ ಜೋರಾಗಿ ಒಂದೂವರೆ ಗಂಟೆ  ಸುರಿಯಿತು.

ಪಟ್ಟಣದ ಸಂತೆ ಸರ್ಕಲ್ ಬಳಿ ಮಳೆ ನೀರು ಸರಾಗವಾಗಿ ಹರಿಯದ ಕಾರಣ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಕೆಲ ದಿನಗಳ ಬಿಡುವಿನ ಬಳಿಕ ಸುರಿದ ಮಳೆಗೆ ರೈತಾಪಿ ವರ್ಗ ಸಂತಸ ಪಟ್ಟಿತು. ಮುಂಗಾರು ಕೃಷಿ ಚಟುವಟಿಕೆಗಳಿಗೆ ಮಳೆ ಪೂರಕವಾಗಿದೆ. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅನುಕೂಲವಾಗಿದೆ ಎಂದು ರೈತ ಬೀಚನಹಳ್ಳಿ ನರಸಿಂಹಮೂರ್ತಿ ತಿಳಿಸಿದರು.

ಎಚ್ಚೆತ್ತುಕೊಳ್ಳದ ಪಂಚಾಯಿತಿ: ಮಳೆಗಾಲ ಶುರುವಾದರೂ ಪಟ್ಟಣದ ಕೆಲ ಚರಂಡಿ ಹಾಗೂ ರಾಜಕಾಲುವೆ ಹೂಳು ಸ್ವಚ್ಛಗೊಳಿಸಿಲ್ಲ. ಈ ಕುರಿತು ‘ಪ್ರಜಾವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಕುರಿತು ಜಿಲ್ಲಾಧಿಕಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT