ಹೊಸಕೋಟೆ: ರಸ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ರಸ್ತೆ ಇಲ್ಲ
ಡಿ.ಎನ್.ವೆಂಕಟೇಶ್
Published : 13 ಜೂನ್ 2025, 5:18 IST
Last Updated : 13 ಜೂನ್ 2025, 5:18 IST
ಫಾಲೋ ಮಾಡಿ
Comments
ಹೆದ್ದಾರಿ ಪಕ್ಕದಲ್ಲಿರುವ ಜಮೀನು ರಸ್ತೆ ನಿರ್ಮಾಣದಿಂದ ಹಾಳಾಗಿರುವುದು
ರಾಷ್ಟ್ರೀಯ ಹೆದ್ದಾರಿ–207
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಿವೆ. ಅಭಿವೃದ್ಧಿಗೆ ಮೊದಲು ಬಲಿಯಾಗುತ್ತಿರುವುದು ರೈತರು. ಅದಕ್ಕೆ ತಾಜಾ ಉದಾಹರಣೆ ಇದು. ಹೆದ್ದಾರಿಯ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುವ ಜೊತೆಗೆ ಇರುವ ಜಮೀನನ್ನು ಸಮರ್ಥವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಇದನ್ನು ಅರಿತು ಸಂಬಂಧಪಟ್ಟವರು ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡಮಟ್ಟದ ರೈತ ಹೋರಾಟಕ್ಕೆ ಕರೆ ನೀಡಲಾಗುವುದು.
ಹರೀಂದ್ರ ಸಿಐಟಿಯು ಮುಖಂಡ ರೈತ
ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಒಂದು ಕಿಲೋ ಮೀಟರ್‌ಗೆ ₹750 ಕೋಟಿ ನೀಡುತ್ತಿರುವ ಸರ್ಕಾರಕ್ಕೆ 152 ಕಿಲೋಮೀಟರ್ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಬೇಕಾದ ₹400 ಕೋಟಿ ಹೊರೆಯೇ?. ಆದಷ್ಟು ಬೇಗ ರಾಜ್ಯ ಸರ್ಕಾರ ₹400 ಕೋಟಿ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಚಳುವಳಿ ಆರಂಭಿಸಲಾಗುವುದು.
ಮೋಹನ್‌ಬಾಬು ರೈತ ಮುಖಂಡ
ತಮಿಳುನಾಡಿನಲ್ಲಿ ಹಾದು ಹೋಗಿರುವ ಇದೇ ರಾಷ್ಟ್ರೀಯ ಹೆದ್ದಾರಿಗೆ ತಮಿಳುನಾಡು ಮುಖ್ಯಮಂತ್ರಿ ಖುದ್ದು ಭೇಟಿ ನೀಡಿ ರೈತರಿಗೆ ಸಮಸ್ಯೆಯಾಗದಂತೆ ಹೆದ್ದಾರಿ ನಿರ್ಮಾಣಕ್ಕೆ ಸೂಚಿಸಿದ್ದಾರೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗೆ ಕಿವಿಯಾಗಲಿ.