ವಿಜಯಪುರ (ದೇವನಹಳ್ಳಿ): ದೇವನಹಳ್ಳಿಯಲ್ಲಿ ಆಗಸ್ಟ್ 24ರಂದು ನಡೆಯಲಿರುವ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಸಿದ್ಧತೆ ಸಂಬಂಧ ನಡೆದ ಪೂರ್ವಭಾವಿ ಸಭೆಗೆ ಪುರಸಭೆಯ ಜೆಡಿಎಸ್ ಸದಸ್ಯರನ್ನು ಆಹ್ವಾನಿಸದೆ ಸಭೆ ನಡೆಸಲಾಗಿದ್ದು, ವಿಜಯಪುರ ಟೌನ್ ಜೆಡಿಎಸ್ನಲ್ಲಿ ಬಣ ರಾಜಕೀಯ ನಡೆಯುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಹಲವು ಗೊಂದಲ ಉಂಟಾಗಿದ್ದರಿಂದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಸಮಾಧಾನ ತರಿಸಿದೆ.

ವಿಜಯಪುರ ಪಟ್ಟಣದ ಒಟ್ಟು 23 ವಾರ್ಡ್ಗಳಿದ್ದು, ಅರ್ಧಕ್ಕಿಂತ ಹೆಚ್ಚು ಮಂದಿ ಜೆಡಿಎಸ್ ಸದಸ್ಯರೇ ಪುರಸಭೆಗೆ ಆಯ್ಕೆಗೊಂಡಿದ್ದಾರೆ. ಆದರೆ, ಸಭೆಗೆ ಕೇವಲ ನಾಲ್ವರು ಸದಸ್ಯರಷ್ಟೇ ಭಾಗವಹಿಸಿದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಪಟ್ಟಣದ 23 ವಾರ್ಡ್ನಲ್ಲಿ ಆಯ್ಕೆಗೊಂಡಿರುವ ಜೆಡಿಎಸ್ ಸದಸ್ಯರನ್ನು ಹಾಗೂ ಪರಭಾವಗೊಂಡ ಎಲ್ಲ ಜೆಡಿಎಸ್ ಸದಸ್ಯರನ್ನು ಪಕ್ಷವು ಪರಿಗಣಿಸದೆ ಸಭೆ ನಡೆಸಿದೆ ಎಂದು ಪುರಸಭೆಯ ಕೆಲ ಜೆಡಿಎಸ್ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲ ವಾರ್ಡ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಭೆ ನಡೆಸಿರುವುದು ಪಕ್ಷಕ್ಕೆ ಅಗೌರವ ತರುವ ಕೆಲಸವಾಗಿದೆ. ಪಕ್ಷವು ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು, ಎಲ್ಲ ಸದಸ್ಯರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಜೆಡಿಎಸ್ ಮುಖಂಡ ಹಾಗೂ ಪುರಸಭೆ ಸದಸ್ಯ ಬೈರೇಗೌಡ ಮನವಿ ಮಾಡಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿಜಯಪುರ ಟೌನ್ ಜೆಡಿಎಸ್ ಭದ್ರಕೋಟೆಯಾಗಿದೆ. ಈಗ ಜೆಡಿಎಸ್ ಎರಡು ಬಣಗಳಾಗಿದ್ದು, ಯುವಕರಿಂದ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಪಕ್ಷದ ಒಡಕನ್ನು ಸರಿಪಡಿಸಬೇಕು ಎಂದು ಜೆಡಿಎಸ್ ಯುವ ಮುಖಂಡ ಸೈಫುಲ್ಲಾ ಪಕ್ಷದ ನಾಯಕರಿಗೆ ಆಗ್ರಹಿಸಿದರು.

‘ಈ ಹಿಂದೆ ವಿಜಯಪುರ ಟೌನ್ ಜೆಡಿಎಸ್ ಸಂಘಟನೆ ಬಲಿಷ್ಠವಾಗಿತ್ತು. ಆದರೆ, ಪಕ್ಷ ಈಗ ಎರಡು ಬಣವಾಗಿ ಗುರುತಿಸಿಕೊಂಡಿರುವುದಕ್ಕೆ ಪಕ್ಷ ಸಂಘಟನೆ ವಿಚಾರ ಗೊಂದಲಕ್ಕೆ ಕಾರಣವಾಗಿದೆ. ಮುಖಂಡರು ಇದನ್ನು ಸರಿಪಡಿಸಬೇಕು’ ಎಂದು ಯುವ ಜನತಾ ದಳದ ಪ್ರಧಾನ ಕಾರ್ಯದರ್ಶಿ ಕಿರಣ್, ಕಾರ್ಯದರ್ಶಿ ಅನಿಲ್ ಗೌಡ, ವಿಜಯಪುರ ಹಾಲಿನ ಡೇರಿ ಸದಸ್ಯ ಸುಹಾಸ್ ಒತ್ತಾಯಿಸಿದರು.

ವಿಜಯಪುರ ಟೌನ್ನಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕೆಲವರು ಪಕ್ಷದ ಸಂಘಟನೆಯ ಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ದೇವರಾಜ್ ಜೆಡಿಎಸ್ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.