ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗೆ ಸಿಗದ ದುರಸ್ತಿ ‘ಗ್ಯಾರಂಟಿ’

Published 21 ಜೂನ್ 2024, 8:20 IST
Last Updated 21 ಜೂನ್ 2024, 8:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದ ದುರಸ್ತಿಗೆ ಕಾದಿರುವ ಶಾಲಾ ಕೊಠಡಿಗಳ ಸಂಖ್ಯೆಯ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ ಹಲವು ತಿಂಗಳೇ ಕಳೆದಿದೆ. ಆದರೂ ಇಲ್ಲಿಯವರೆಗೂ ಟೆಂಡರ್‌ ಹಾಗೂ ಪತ್ರ ವ್ಯವಹಾರಲ್ಲೇ ಉಳಿದಿವೆ ಹೊರತು, ದುರಸ್ತಿಯ ‘ದುರಸ್ತಿ’ಯ ಗ್ಯಾರಂಟಿ ದೊರೆತಿಲ್ಲ.

ಒಂದೆರಡು ದಿನ ಮಳೆಯಾದರು ಮಕ್ಕಳನ್ನು ಕೊಠಡಿಗಳಲ್ಲಿ ಕುರಿಸಿ ಪಾಠ ಮಾಡುವುದೇ ಕಷ್ಟ ಎನ್ನುವ ಶಿಕ್ಷಕರ ಅಳಲು ಇನ್ನೂ ಸರ್ಕಾರಕ್ಕೆ ಮುಟ್ಟಿಲ್ಲ ಎಂದು ಪೋಷಕರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಹೆಚ್ಚುವರಿ ಕೊಠಡಿಗಳಿಗೆ ಯಾವ ಶಾಲೆಗಳಿಂದಲು ಬೇಡಿಕೆಯೇ ಇಲ್ಲ. ಆದರೆ ಇರುವ ಕೊಠಡಿಗಳನ್ನು ದುರಸ್ತಿ ಮಾಡಿಸಿಕೊಡುವ ಬಗ್ಗೆ ಹೇಳುತ್ತಲೇ ಬರಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಅಂಕಿ ಅಂಶಗಳ ಪ್ರಕಾರವೇ ದೊಡ್ಡ ಪ್ರಮಾಣ ದುರಸ್ತಿಗಾಗಿ 125 ಶಾಲೆಗಳು ಕಾಯುತ್ತಿವೆ.

ಬೇಸಿಗೆ ರಜೆಯಲ್ಲಿ ಕಾಮಗಾರಿಗಳನ್ನು ಮಾಡಿ ಮುಗಿಸಿದ್ದರೆ ತರಗತಿಗಳನ್ನು ನಡೆಸಲು ಅನುಕೂಲವಾಗುತಿತ್ತು. ಶೈಕ್ಷಣಿಕ ವರ್ಷ ಪ್ರಾರಂಭವಾದಗಲೇ ಶಾಲೆಗಳ ನೆನಪಾಗುತ್ತದೆ. ಯಾವ ಕೆಲಸಗಳನ್ನು ಯಾವ ಸಂದರ್ಭದಲ್ಲಿ ಮಾಡಿ ಮುಗಿಸಬೇಕು ಎನ್ನುವ ಕನಿಷ್ಠ ತಿಳಿವಳಿಕೆಯು ಇಲ್ಲದಾಗಿದೆ ನಮ್ಮ ಆಡಳಿತಗಾರರಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ದೊಡ್ಡಬೆಳವಂಗಲ ಗ್ರಾಮದ ತಿಮ್ಮಯ್ಯ.

ಅಂಕಿ ಅಂಶ

584

ಒಟ್ಟು ಕೊಠಡಿಗಳ ಸಂಖ್ಯೆ

355

ಸುಸ್ಥಿಯಲ್ಲಿ ಇರುವ ಕೊಠಡಿಗಳ ಸಂಖ್ಯೆ

93

ಸಣ್ಣ ಪ್ರಮಾಣದ ದುರಸ್ತಿ ಕೊಠಡಿಗಳು

125

ದೊಡ್ಡ ಪ್ರಮಾಣದ ದುರಸ್ತಿ ಕೊಠಡಿಗಳು‌

***

326

ಸರ್ಕಾರಿ ಪ್ರಾಥಮಿಕ ಶಾಲೆ

17

ಸರ್ಕಾರಿ ಪ್ರೌಢ ಶಾಲೆ

12,432

1 ರಿಂದ 7ನೇ ತರಗತಿವರೆಗೆ ವಿದ್ಯಾರ್ಥಿಗಳ ಸಂಖ್ಯೆ

4,741

8 ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳ ಸಂಖ್ಯೆ

ದುರಸ್ತಿಗೆ ಕಾದಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕವಡಗೆರೆ ಗ್ರಾಮದ ಸರ್ಕಾರಿ ಶಾಲಾ ಕೊಠಡಿ    
ದುರಸ್ತಿಗೆ ಕಾದಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕವಡಗೆರೆ ಗ್ರಾಮದ ಸರ್ಕಾರಿ ಶಾಲಾ ಕೊಠಡಿ    
ತುರ್ತು ದುರಸ್ತಿ ಆಗಬೇಕಿರುವ 15 ಶಾಲಾ ಕೊಠಡಿಗಳಿಗೆ ಶಾಸಕರ ನಿಧಿಯಿಂದ ಹಣ ನೀಡಿದ್ದಾರೆ. ಉಳಿದಂತೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಕುರಿತಂತೆ ಶಿಕ್ಷಣ ಸಚಿವರು ಈಚೆಗೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪಟ್ಟಿ ನೀಡುವಂತೆಯು ಸೂಚಿಸಿದ್ದಾರೆ.
ಸೈಯೀದಾ ಅನೀಸ್‌ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಳ್ಳಾಪುರ
ಕುಸಿಯುತ್ತಿದೆ ದಾಖಲಾತಿ
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ಶಾಲಾ ಕಟ್ಟಡ ಸೂಕ್ತ ಆಟದ ಮೈದಾನ ಶೌಚಾಲಯ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೆ ಪೋಷಕರು ಸರ್ಕಾರಿ ಶಾಲೆಗಳತ್ತ ಬಾರದೆ ಖಾಸಗಿ ಶಾಲೆಗಳತ್ತ ಹೋಗುವಂತೆ ಸರ್ಕಾರವೇ ಪರೋಕ್ಷವಾಗಿ ಮಾಡುತ್ತಿದೆ. ಆರ್‌.ಟಿ.ಇ ನೀತಿಯನ್ನು ಜಾರಿಗೆ ತರುವ ಮೂಲಕ ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವಂತೆ ಮಾಡಿದ್ದ ನಂತರ ಈಗ ಸೂಕ್ತ ಮೂಲ ಸೌಕರ್ಯಗಳನ್ನು ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನುತ್ತಾರೆ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT