ಕೆರೆಯ ಕೊಡಿಯ ಬಳಿ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ
ಕೆರೆಯ ಕೊಡಿಯ ಸೇತುವೆ ಕೆಳಗೆ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕೊಳಚೆ ನೀರು ಶೇಖರಣೆಯಾಗಿರುವುದು
ಕೆರೆ ಏರಿಯ ಮೇಲೆ ಕಸ
ಮಲ್ಲಸಂದ್ರ ಕೆರೆ ಉಳಿಸಿ ಎಂದು ಬೇಡಿಕೊಂಡರು ಯಾವ ರಾಜಕೀಯ ನಾಯಕರು ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಕೆರೆಯ ಸ್ಥಿತಿಗತಿ ಹೇಗಿದೆ ಎಂಬುದು ತಿಳಿಯುತ್ತಿಲ್ಲ
ಸಮೇತನಹಳ್ಳಿ ರಾಮಚಂದ್ರ, ರೈತ ಮುಖಂಡ
ತಹಶೀಲ್ದಾರ್ ಅವರು ಒತ್ತುವರಿಯಾಗಿರುವ ಕೆರೆ ಜಾಗ ತೆರವುಗೊಳಿಸಿ ಕೆರೆಯ ಸುತ್ತಲೂ ಬೆಲಿ ಹಾಕಿಸಬೇಕು. ಕೆರೆ ಆವರಣದಲ್ಲಿ ಕಸ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.
ಎಂ.ಮುನಿರಾಜು, ಕಾರ್ಯದರ್ಶಿ ದಲಿತ ಹಕ್ಕುಗಳ ಸಮಿತಿ
ಸ್ಥಳೀಯರ ಒತ್ತಾಸೆ
ಈ ಕೂಡಲೇ ಕೆರೆ ಅಂಗಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಗಿಡಗೆಂಟಿ ಮತ್ತು ತ್ಯಾಜ್ಯ ತೆರವುಗೊಳಿಸಬೇಕು. ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಬೇಕು. ಕೆರೆ ಜಾಗವನ್ನ ಹದ್ದುಬಸ್ತು ಮಾಡಬೇಕು. ಕೆರೆ ಆವರಣದಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣವಾಗಿಸಬೇಕು. ಮಾದರಿ ಕೆರೆಯಾಗಿ ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮನವಿಗೆ ಸಿಗದ ಸ್ಪಂದನೆ
ಕೆರೆ ಉಳಿವು–ಅಭಿವೃದ್ಧಿಗೆ ಸಾಕಷ್ಟು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವ ಪ್ರಯೋಜನೆ ಆಗಿಲ್ಲ. ನನಾಮಕಾವಾಸ್ತೆ ಎರಡೂ ಬಾರಿ ಮಾತ್ರ ಸರ್ವೇ ಮಾಡಿಸಿದ್ದಾರೆಷ್ಟೇ. ಒತ್ತುವರಿ ತೆರವುಗೊಳಿಸಿ ಬೇಲಿ ಹಾಕಿಲ್ಲ. ಒಂದು ಕಾಲದಲ್ಲಿ ಜೀವನಾಡಿಯಾಗಿ ಎಲ್ಲರನ್ನು ಪೊರೆದ ಈ ಕೆರೆ ಉಳಿಸಿಕೊಳ್ಳಲು ಇಲ್ಲಿನ ಸ್ಥಳೀಯ ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ ಓಬಳಾಪುರ ವಿರಭದ್ರಯ್ಯ ರೈತ ಮುಖಂಡ