ಆನೇಕಲ್: ತಾಲ್ಲೂಕಿನ ಎಲೆಕ್ಟ್ರಾನಿಕ್ಸಿಟಿಯ ಐಎಸ್ಬಿಆರ್ ಕಾನೂನು ಕಾಲೇಜಿನಲ್ಲಿ ಆರಂಭಿಸಲಾದ ಕಾನೂನು ಸಂಶೋಧನಾ ಕೇಂದ್ರವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟರ್ ಬಿ.ಎಸ್.ರೆಡ್ಡಿ ಅವರು ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಾನೂನು ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಕರು ದೊರೆಯುತ್ತಾರೆ. ಪಿಎಚ್.ಡಿ ಸಂಶೋಧನೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಹೇಳಿದರು.

ಕಾನೂನು ವಿಷಯವು ಸಾಗರದಂತೆ, ಸಂವಿಧಾನ, ಪರಿಸರ ಕಾನೂನು, ಕಾರ್ಮಿಕರ ಕಾನೂನು ಸೇರಿದಂತೆ ಹಲವು ಬಗೆಯ ಕಾನೂನು ವಿಷಯಗಳಿದ್ದು ಸಾಮಾಜಿಕವಾಗಿ ಹಿಂದುಳಿದವರನ್ನು ಸಮಾಜದ ಮುನ್ನೆಲೆಗೆ ತರಲು ಪಿಎಚ್.ಡಿ ಪದವೀಧರರು ಸಂಶೋಧನೆ ನಡೆಸಬೇಕು ಎಂದು ಸಲಹೆ ನೀಡಿದರು.

ಐಎಸ್ಬಿಆರ್ ಕಾಲೇಜಿನ ಆಡಳಿತ ಮಂಡಳಿಯ ತಪನ್ ನಾಯಕ್, ಕಾನೂನು ಕಾಲೇಜಿನ ಪ್ರಾಚಾರ್ಯ ಬಲವಂತ್ ಕಳಸ್ಕರ್, ಸಂಜೆ ಕಾಲೇಜಿನ ಪ್ರಾಚಾರ್ಯ ಶ್ರೀಕಂಠ, ಕಾಲೇಜಿನ ಲಕ್ಷ್ಮೀನಾರಾಯಣ್, ನರಸಯ್ಯ, ಕಾರ್ತೀಕ್ ಇದ್ದರು.