ಭಾನುವಾರ, ಸೆಪ್ಟೆಂಬರ್ 26, 2021
21 °C

ಆನೇಕಲ್: ಪಾರಂಪರಿಕ ನೇಕಾರಿಕೆ ಉಳಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಕೊರೊನಾದಿಂದಾಗಿ ನೇಕಾರರ ಬದುಕು ತೀವ್ರ ಸಮಸ್ಯೆಗೆ ಸಿಲುಕಿಕೊಂಡಿದೆ. ಹಾಗಾಗಿ, ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ನೇಕಾರರ ಪ್ರತಿ ಕುಟುಂಬಕ್ಕೆ ₹ 10 ಸಾವಿರ ಪರಿಹಾರ ನೀಡಬೇಕು’ ಎಂದು ಮುಖಂಡ ಮೋಹನ್‌ ತಿಳಿಸಿದರು.

ಪಟ್ಟಣದ ವೀವರ್ಸ್‌ ಕಾಲೊನಿಯಲ್ಲಿ ರಾಷ್ಟ್ರೀಯ ನೇಕಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾರಂಪರಿಕವಾಗಿ ನೇಕಾರಿಕೆ ವೃತ್ತಿಯ ಮೂಲಕ ಜೀವನವನ್ನು ನೂರಾರು ಮಂದಿ ರೂಪಿಸಿಕೊಂಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನೇಕಾರಿಕೆಗೆ ಸೂಕ್ತ ಸೌಲಭ್ಯ ದೊರೆಯದೇ ಮೂಲೆಗುಂಪಾಗಿದೆ. ಪಾರಂಪರಿಕ ವೃತ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ನೇಕಾರರ ದಿನಾಚರಣೆ ಅಂಗವಾಗಿ ಕೈಮಗ್ಗಗಳಿಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು.

ಮುಖಂಡರಾದ ಕೃಷ್ಣ, ಚಿಕ್ಕಣ್ಣ, ರಾಮಕೃಷ್ಣ, ಸೋಮು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.