ಭಾನುವಾರ, ಮೇ 9, 2021
19 °C

ಪ್ಲಾಸ್ಟಿಕ್ ತ್ಯಾಜ್ಯ: ಕಲ್ಯಾಣಿ ಕಲುಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದ ಗಿಡ್ಡಪ್ಪನಹಳ್ಳಿ ರಸ್ತೆಯ ಸಮೀಪವಿರುವ ಬಾಳೆರಾಜನ (ಹಸ್ತ ತೋರಿಸುತ್ತಿದ್ದ ಬಾವಿ) ಕಲ್ಯಾಣಿಯಲ್ಲಿ ಪೂರ್ಣ ಕಲುಷಿತಗೊಂಡಿದೆ.

ಈಚೆಗೆ ಬಿದ್ದ ಮಳೆಯ ನೀರಿನೊಂದಿಗೆ ಪಟ್ಟಣದ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಕಲ್ಯಾಣಿಯ ನೀರು ಸಂಪೂರ್ಣ ತ್ಯಾಜ್ಯಮಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಫಾರೂಖ್ ಮತ್ತು
ಮುಖಂಡ ರಾಜಕುಮಾರ್ ಅವರು ಆಗ್ರಹಿಸಿದ್ದಾರೆ.

ಕಲ್ಯಾಣಿಯಲ್ಲಿ ಗ್ರಾಮದ ತ್ಯಾಜ್ಯ ಮತ್ತು ಯಥೇಚ್ಛವಾಗಿ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು ಇನ್ನಿತರ ತ್ಯಾಜ್ಯ ಸೇರಿ ನೀರು ಕೊಳೆತು ಕರಿಯ ಬಣ್ಣಕ್ಕೆ ತಿರುಗಿದೆ. ಪಶು, ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ದಾಹವನ್ನು ತೀರಿಸುವ ಸಾರ್ವಜನಿಕ ಜಲಮೂಲಗಳನ್ನು ಸ್ವಚ್ಛವಾಗಿರುಸುವುದು ಮತ್ತು ಕಾಪಾಡಿಕೊಳ್ಳುವತ್ತ ಅಧಿಕಾರಿ ವರ್ಗ ಗಮನ ಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಕಾಮಗಾರಿ ಯೋಜನೆ ಅವೈಜ್ಞಾನಿಕ: ಬಾಳೆರಾಜನ ಕಲ್ಯಾಣಿ ಪಕ್ಕದಲ್ಲಿ ದೊಡ್ಡ ಕಾಲುವೆ (11-12 ಅಡಿ)ಯನ್ನು ಸೂಲಿಬೆಲೆ ಗ್ರಾಮ ಪಂಚಾಯಿತಿ ಸುಮಾರು ₹7 ಲಕ್ಷ ಅಂದಾಜು ಮೊತ್ತದಲ್ಲಿ ನಿರ್ಮಿಸಿದೆ. ನಿರ್ಮಾಣ ಮಾಡಿರುವ ಕಾಲುವೆಯ ಹಿಂದಿನ ಭಾಗದಲ್ಲಿ ಕಾಲುವೆಯನ್ನು ಅಭಿವೃದ್ಧಿ ಪಡಿಸದಿರುವುದರಿಂದ ಮತ್ತು ಮುಂದೆ ಕಾಲುವೆ ಕಾಮಗಾರಿ ವಿಸ್ತರಿಸದಿರುವುದ ರಿಂದ ಮಲಿನವಾಗಿದೆ. ಕಾಲುವೆಯಲ್ಲಿ ಹರಿಯುವ ಪಟ್ಟಣದ ಬಚ್ಚಲು ನೀರಿನೊಂದಿಗೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಮಳೆಯ ನೀರಿನೊಂದಿಗೆ ಕಲ್ಯಾಣಿಯ ಒಡಲನ್ನು ಸೇರುತ್ತಿದೆ. ಕಲ್ಯಾಣಿ ಸಂಪೂರ್ಣವಾಗಿ ತ್ಯಾಜ್ಯದಿಂದ ಕಲುಷಿತಗೊಂಡು ದುರ್ನಾತ ಬೀರುತ್ತಿದೆ ಎಂದು ದೂರಿದ್ದಾರೆ.

‘ಈ ಕಾಲುವೆಯ ಎದುರಿನಲ್ಲಿ ಸುಮಾರು ವರ್ಷಗಳ ಹಿಂದೆ ಪಂಚಾಯಿತಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಈ ಕಾಲುವೆ ಕಾಮಗಾರಿಯಲ್ಲೂ ಕಾಲುವೆಯನ್ನು ಕೆರೆಗೆ ಸಂಪರ್ಕ ಕಲ್ಪಿಸದೆ ಮಧ್ಯದಲ್ಲಿ ಅಪೂರ್ಣವಾಗಿದೆ. ಇದರಿಂದ ಮಳೆ ನೀರು ಸಮೀಪದ ಬಯಲಿನಲ್ಲಿ ತುಂಬಿಕೊಳ್ಳುತ್ತದೆ’ ಎನ್ನುತ್ತಾರೆ ಎಸ್.ಎಂ.ಮೌಲ.

‘ಕ್ರಿಯಾ ಯೋಜನೆಯಲ್ಲಿ ಮುಂದುವರೆದ ಕಾಲುವೆ ಕಾಮಗಾರಿಗೆ ಅನುಮೋದನೆ ದೊರೆತಿದ್ದರೆ ಪರಿಶೀಲಿಸಿ ಕಾಲುವೆ ಕಾಮಗಾರಿ ವಿಸ್ತರಿಸಲಾಗುವುದು’ ಎಂದು ಸೂಲಿಬೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಂದರ್ ಸಮಜಾಯಿಷಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು