ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿ ಹಂತಕರು ಪೊಲೀಸ್‌ ಬಲೆಗೆ: ಎಸ್ಪಿ ಡಾ.ಕೆ.ವಂಶಿಕೃಷ್ಣ ಮಾಹಿತಿ

ಮೂರು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಬಂಧನ :
Last Updated 5 ಆಗಸ್ಟ್ 2021, 1:11 IST
ಅಕ್ಷರ ಗಾತ್ರ

ಆನೇಕಲ್: ಸುಪಾರಿ ಕೊಲೆಯಲ್ಲಿ ಭಾಗಿಗಳಾಗಿದ್ದ ಆರು ಮಂದಿ ಆರೋಪಿ
ಗಳನ್ನು ಬಂಧಿಸುವಲ್ಲಿ ತಾಲ್ಲೂಕಿನ ಅತ್ತಿಬೆಲೆ ಪೊಲೀಸರು ಯಶಸ್ವಿ
ಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾ
ಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.

ತಾಲ್ಲೂಕಿನ ಬಿದರಗುಪ್ಪೆ ಸೋಮಶೇಖರ್‌ (52) ಎಂಬುವವರು ಗೂಡ್ಸ್‌ ಟೆಂಪೊ ಚಾಲಕನಾಗಿ ಕೆಲಸ ಮಾಡುತ್ತಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಗ್ರಾಮದ ಸತ್ಯನಾರಾಯಣ ಎಂಬುವವರ ಮಧ್ಯೆ ಸುಮಾರು 15 ವರ್ಷಗಳಿಂದ ವಿವಾದ ನಡೆಯುತ್ತಿದ್ದು ನ್ಯಾಯಾಲಯದಲ್ಲಿ ಸೋಮಶೇಖರ್‌ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ಸತ್ಯನಾರಾಯಣ, ಸೋಮ
ಶೇಖರ್‌ ಅವರನ್ನು ಕೊಲೆ ಮಾಡಲು ಮಾಲೂರಿನ ಅರ್ಚಕ ಲಕ್ಷ್ಮೀನಾರಾಯಣ ಅವರಿಗೆ ₹1.5ಲಕ್ಷ ಸುಪಾರಿ ನೀಡಿದ್ದರು.

ಶಾಂತರಾಜು, ಸಂತೋಷ್‌, ನಂದೀಶ್‌ ಎಂಬುವವರು ಅಂಬರೀಷ್‌ ಮತ್ತು ಸುಬ್ರಮಣಿ ಜತೆಗೂಡಿ ಸೋಮಶೇಖರ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಜುಲೈ 2ರಂದು ಸೋಮಶೇಖರ್‌ ತಾಲ್ಲೂಕಿನ ಬಳಗಾರನಹಳ್ಳಿ ಬಳಿ ಟೆಂಪೊ ಓಡಿಸುತ್ತಿದ್ದಾಗ ಅಡ್ಡಗಟ್ಟಿ ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿತ್ತು.

ಆರೋಪಿಗಳ ಪತ್ತೆಗೆ ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌ ಮತ್ತು ಪಿಎಸ್‌ಐ ಮುರಳಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅಂಬರೀಷ್‌ (35), ಸತ್ಯನಾರಾಯಣ (52), ಶಾಂತರಾಜು(40), ಲಕ್ಷ್ಮೀನಾರಾಯಣ (52), ಸುಬ್ರಮಣಿ (50), ಸಂತೋಷ್‌ (39) ಮತ್ತು ನಂದೀಶ್‌(40) ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹೆಬ್ಬಗೋಡಿ ಪೊಲೀಸ್‌ ಠಾಣೆಯ ಶಿಕಾರಿಪಾಳ್ಯದಲ್ಲಿ ಹಣಕ್ಕಾಗಿ ಬಾಲಕನನ್ನು ಕೊಲೆ ಮಾಡಿದ ಆರೋಪದಡಿ ಆರೋಪಿಗಳಾದ ಛತ್ತೀಸ್‌ಗಢ ಮೂಲದ ಮಹಮದ್‌(26), ಮಹಮದ್‌ ನವೀದ್‌(19), ಮಹಮದ್‌ ನೌಶೇದ್(29), ಎಂ.ಡಿ.ಸಿರಾಜ್‌(24) ಎಂಬ ಆರೋಪಿಗಳನ್ನು ಹೆಬ್ಬಗೋಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೌತಮ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಡಿವೈಎಸ್ಪಿ ಎಂ.ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಕೆ.ವಿಶ್ವನಾಥ್‌, ಗೌತಮ್, ರಾಘವೇಂದ್ರ ಇಮ್ರಾಪುರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT