ಮಳೆ ಬಾರದಿದ್ದರೆ ರಾಗಿ ಒಣಗಿ ಹೋಗುತ್ತದೆ ಎಂದು ಆತಂಕದಲ್ಲಿ ಬೆಳೆ ನೋಡುತ್ತಿರುವ ಸೂಲಿಬೆಲೆ ಹೋಬಳಿಯ ಬಾಲೆನಹಳ್ಳಿ ರೈತ
ರೈತರು 1 ಎಕರೆಗೆ 10 ಕೆ.ಜಿ ಮಾತ್ರ ಯೂರಿಯಾ ಹಾಕಬೇಕು. ಆದರೆ ಒಂದು ಚೀಲದಷ್ಟು ಯೂರಿಯಾ ಹಾಕಲಾಗಿದೆ. ಇದರಿಂದ ತಾಲ್ಲೂಕಿನ ಕೆಲವೆಡೆ ರಾಗಿ ನೆಲಕಚ್ಚಿದೆ. ನೆಲೆ ಕಚ್ಚಿರುವುದೇ ನಷ್ಟ ಅಲ್ಲ ರೈತರು ಅತಿಯಾದ ಲಾಭದ ದೃಷ್ಟಿಯಲ್ಲಿ ಬೆಳೆಗಳಿಗೆ ಬೇಡಿಕೆಗಿಂತ ಹೆಚ್ಚು ಗೊಬ್ಬರ ಕೊಟ್ಟರೆ ಬೆಳೆ ನಷ್ಟವಾಗುವುದು ಸಹಜ
– ಚಂದ್ರಪ್ಪ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ
ತಾಲ್ಲೂಕಿನಲ್ಲಿ ಎರಡು ಹಂತದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಒಂದು ಬೆಳೆ ಕಟಾವು ಹಂತಕ್ಕೆ ಬಂದಿದ್ದು ಕಳೆದ ವಾರ ಸುರಿದ ಮಳೆ ಮತ್ತು ಗಾಳಿಗೆ ನೆಲಕ್ಕೆ ಕಚ್ಚಿದೆ. ಇನ್ನೋದು ಬೆಳೆ ಈಗತಾನೆ ತೆನೆ ಹಾಲುಕಟ್ಟುತ್ತಿದೆ. ಈಗ ತಾಲ್ಲೂಕಿನ ರಾಗಿ ರೈತರ ಪರಿಸ್ಥಿತಿ ಹೇಗಿದೆ ಎಂದರೆ ಒಬ್ಬರಿಗೆ ಮಳೆ ಬಂದರೆ ಬೆಳೆ ನಷ್ಟ ಮತ್ತೊಬ್ಬರಿಗೆ ಮಳೆ ಬರದಿದ್ದರೆ ನಷ್ಟ ಅನುಭವಿಸುವಂತಹ ಅತಂತ್ರ ಸ್ಥಿತಿ ಇದೆ.