ಆನೇಕಲ್: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿ ಮಳೆ ಸುರಿಯುತ್ತಿದೆ. ಬೆಳಗಿನಿಂದ ಸಂಜೆಯವರೆಗೂ ಮೋಡದ ವಾತಾವರಣ ಇರುವುದರಿಂದ ಚಳಿಯ ವಾತಾವರಣ ನಿರ್ಮಾಣವಾಗಿದೆ.

ಚುಮು ಚುಮು ಚಳಿಯಿಂದ ಮೈದಾನಗಳು, ಪಾರ್ಕ್ಗಳಲ್ಲಿ ವಾಯು ವಿಹಾರಿಗಳ ಸಂಖ್ಯೆ ವಿರಳವಾಗಿದೆ. ಹಿರಿಯ ನಾಗರಿಕರು ಮತ್ತು ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಸೋಮವಾರ ಸಹ ಬೆಳಗಿನಿಂದ ಸಂಜೆಯವರೆಗೂ ಸುರಿದ ಮಳೆಯಿಂದ ಜನರು ಹೊರ ಬರಲು ಹಿಂದೇಟು ಹಾಕಿದರು.

ತಾಲ್ಲೂಕಿನಾದ್ಯಂತ ಸೋಮವಾರ ಭಾರಿ ಮಳೆಯಾಯಿತು. ಭಾನವಾರ ರಾತ್ರಿ 11ರ ಸುಮಾರಿಗೆ ಆರಂಭವಾದ ಮಳೆ ಸತತವಾಗಿ ಸೋಮವಾರ ಸಂಜೆಯವರೆಗೂ ಸುರಿಯಿತು. ಆಗಾಗ್ಗೆ ನಿಲ್ಲುತ್ತಿದ್ದ ಮಳೆ ಮತ್ತೆ ಆರಂಭವಾಗುತ್ತಿದ್ದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಯಿತು.

ವಾರದ ಮೊದಲ ದಿನವೇ ಮಳೆಯಾದ್ದರಿಂದ ಕೆಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಛತ್ರಿಯನ್ನು ಹಿಡಿದು ಸಾಗುತ್ತಿದ್ದರು. ಕೈಗಾರಿಕೆ ಪ್ರದೇಶಗಳಲ್ಲಿಯೂ ಮಳೆಯಿಂದಾಗಿ ಕಾರ್ಮಿಕರು ಪರದಾಡುವಂತಾಗಿತ್ತು.

ಕೆರೆ ಕೋಡಿ: ಹೆನ್ನಾಗರ ಕೆರೆಯು ಮಳೆಯಿಂದ ಕೋಡಿ ಬಿದ್ದಿದೆ. ಕೋಡಿ ಹೋದ ನೀರು ತೋಟಗಳಿಗೆ ನುಗ್ಗುತ್ತಿದೆ. ಹೆನ್ನಾಗರ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವುದರಿಂದ ಕೋಡಿ ಹೋಗಿದ್ದು ಕೆರೆಯ ನೀರು ಹೆನ್ನಾಗರ-ಮಾಸ್ತೇನಹಳ್ಳಿ ರಸ್ತೆಯಲ್ಲಿ ಹರಿಯುತ್ತಿದೆ.

- ಕಾಲುವೆಯಾದ ರಸ್ತೆಗಳು ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ನೀರಿನಿಂದ ತುಂಬಿತ್ತು. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸಿದರು. ಹೆಬ್ಬಗೋಡಿ ಬೊಮ್ಮಸಂದ್ರ ಜಿಗಣಿ ಕೈಗಾರಿಕಾ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಗಿ ರಸ್ತೆಗಳು ಮಳೆಯ ಕಾಲುವೆಗಳಾಗಿದ್ದವು. ಆನೇಕಲ್-ಚಂದಾಪುರ ರಸ್ತೆ ಆನೇಕಲ್—ಜಿಗಣಿಯ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಕಂಡು ಬಂದಿತು. ದಾಇ ಕಾಣದಾಯಿತು ತಾಲ್ಲೂಕಿನ ಮರಸೂರು ಗೇಟ್—ಚಂದಾಪುರ ರಸ್ತೆಯಲ್ಲಿ ಭಾರಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಕಾಣದಂತೆ ಆಗಿತು. ರಸ್ತೆ ಗುಂಡಿಗಳಲ್ಲಿ ವಾಹನ ಚಲಾಯಿಸಲು ದ್ವಿಚಕ್ರ ವಾಹನ ಮತ್ತು ಕಾರು ಸವಾರರು ಪರದಾಡಿದರು. ಆನೇಕಲ್ನ ಪ್ರಮುಖ ರಸ್ತೆಗಳ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಸಂಚರಿಸಲು ಸರ್ಕಸ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.