ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ: ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು

Last Updated 20 ನವೆಂಬರ್ 2021, 21:07 IST
ಅಕ್ಷರ ಗಾತ್ರ

ದೇವನಹಳ್ಳಿ: ಮಳೆ ಆರ್ಭಟ ಶನಿವಾರವೂ ಮುಂದುವರೆದಿದೆ. ದೇವನಹಳ್ಳಿಯ ಅಕ್ಕುಪೇಟೆ, ಕೋಡಿಮಂಚೇನಹಳ್ಳಿ ಜನವಸತಿ ಪ್ರದೇಶ ಮತ್ತು ಹೀರಾನಂದಾನಿ ವಿಲ್ಲಾಗೆ ನೀರು ನುಗ್ಗಿದೆ.ಬೊಮ್ಮವಾರದ ಬಳಿ ಅಂಡರ್‌ಪಾಸ್‌ ಜಲಾವೃತಗೊಂಡಿದ್ದು, 10 ಅಡಿಯಷ್ಟು ನೀರು ನಿಂತಿದೆ.

ದೇವನಹಳ್ಳಿ ಸುತ್ತಮುತ್ತರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಹರಿದು ಹೋಗಲು ಜಾಗ ಇಲ್ಲದೆ ನೀರು ಊರೊಳಗೆ ನುಗ್ಗುತ್ತಿದೆ.

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್ ಕುಮಾರ್ಶನಿವಾರ ದೇವನಹಳ್ಳಿಯ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಗುರುತಿಸಿ, ಅಳತೆ ಮಾಡಿಸಲಾಗುತ್ತಿದೆ. ಆದಷ್ಟೂ ಶೀಘ್ರ ಒತ್ತುವರಿ ತೆರವು ಕಾರ್ಯ ಆರಂಭಿಸಲಿದ್ದೇವೆ. ಈಗಾಗಲೇ ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಕಾಲುವೆಯು ಎಲ್ಲಿ ಒತ್ತುವರಿ ಆಗಿದೆಯೋ ಅಂತಹ ಕಡೆಗಳಲ್ಲಿ ಮಾತ್ರ ಮಳೆ ನೀರು ಹೊರ ಹೋಗಲು ಜಾಗ ಇಲ್ಲದೆ ಸಮಸ್ಯೆಯಾಗಿದೆ. ರಾಜಕಾಲುವೆ ಒತ್ತುವರಿಯಾದಾಗ ಮಾತ್ರವೇ ಇಂತಹ ತಿ ನಿರ್ಮಾಣವಾಗುತ್ತದೆ.ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ದೇವನಹಳ್ಳಿ ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿರುವುದಕ್ಕೂ ಇದೇ ಕಾರಣ ಎನ್ನಲಾಗಿದೆ. ತಹಶೀಲ್ದಾರರೊಂದಿಗೆ ಪರಿಶೀಲನೆ ನಡೆಸಿ, ಅಲ್ಲಿಯೂ ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಅರುಳ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT