ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ನಾಲ್ವರನ್ನು ಬಲಿ ಪಡೆಯಿತು ‘ಲಾಂಗ್‌ ಡ್ರೈವ್‌’

ಇಬ್ಬರಿಗೆ ಗಾಯ
Last Updated 16 ಫೆಬ್ರುವರಿ 2022, 19:43 IST
ಅಕ್ಷರ ಗಾತ್ರ

ಹೊಸಕೋಟೆ: ಕೋಲಾರ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75 ಅಟ್ಟೂರು ಗೇಟ್ ಬಳಿ ಮಂಗಳವಾರ ತಡರಾತ್ರಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಲಾರಿಗೆ ಅಪ್ಪಳಿಸಿದ್ದು, ಕಾರಿನಲ್ಲಿದ್ದವರಲ್ಲಿ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಭರತ್ (22), ಸಿರಿಲ್ (21), ವೈಷ್ಣವಿ (22), ವೆಂಕಟ್(20) ಸಾವನ್ನಪ್ಪಿದ ವಿದ್ಯಾರ್ಥಿಗಳು.ಯುವತಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಮತ್ತು ಆಂಧ್ರ ಪ್ರದೇಶದ ಚಿತ್ತೂರು, ಕಡಪಾ ಹಾಗೂ ಒಂಗುಲದ ವಿದ್ಯಾರ್ಥಿ
ಗಳು ಬೆಂಗಳೂರಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಂಕಿರೆಡ್ಡಿ, ಕೃಷ್ಣಶ್ರೀ ಎಂಬ ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರು ವಿದ್ಯಾರ್ಥಿಗಳು ಕಾರಿನಲ್ಲಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕೋಲಾರ ರಸ್ತೆಯ ನರಸಾಪುರದ ಬಳಿಯ ‘ಕಾಫಿ ಡೇ’ಗೆ ಲಾಂಗ್ ಡ್ರೈವ್ ತೆರಳಿದ್ದರು. ಊಟ ಮುಗಿಸಿ ರಾತ್ರಿ 2.30ಕ್ಕೆ ಬೆಂಗಳೂರಿಗೆವಾಪಸ್ ಹೊರ
ಟಾಗ ಕಾರು, ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿ ಹೊಡೆದು, ಕೋಲಾರ ಕಡೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರುನಜ್ಜುಗುಜ್ಜಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಎಸ್‌.ಪಿ ವಂಶಿಕೃಷ್ಣ ಮತ್ತು ಹೆಚ್ಚುವರಿ ಎಸ್‌.ಪಿ ಲಕ್ಷ್ಮಿ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT