ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ: ತಲೆಮರೆಸಿಕೊಂಡಿದ್ದ ಪತಿ ಸೆರೆ

Published 13 ಏಪ್ರಿಲ್ 2024, 13:41 IST
Last Updated 13 ಏಪ್ರಿಲ್ 2024, 13:41 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪತ್ನಿಯ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಶನಿವಾರ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಪಟ್ಟಣದ ನಿವಾಸಿ ಪುರುಷೋತ್ತಮ್ ಮತ್ತು ಇವರ ಅಣ್ಣ ಪದ್ಮನಾಭಯ್ಯ ಬಂಧಿತರು.

‘ನನ್ನ ಪತಿ ಪುರುಷೋತ್ತಮ್‌ ₹14 ಲಕ್ಷ ಹಣ ಪಡೆದುಕೊಂಡು, ಆರು ವರ್ಷ ನನ್ನ ಜತೆ ಸಂಸಾರ ನಡೆಸಿದ್ದರು. ನಂತರ ನನ್ನ ಜಾತಿಯನ್ನು ನಿಂದಿಸಿ, ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ’ ಎಂದು ಆರೋಪಿಸಿ ಶಾರದಾ ಎಂಬುವವರು ಪುರುಷೋತ್ತಮ್‌ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಬಳಿಕ ಪಟ್ಟಣದ ಠಾಣೆಗೆ ತೆರಳಿ ‘ಎರಡು ಮಕ್ಕಳ ಇರುವ ನನಗೆ ಬೆದರಿಕೆ ಹಾಕಿ, ನನ್ನ ಗಂಡನಿಂದ ದೂರ ಮಾಡಿ, ಮದುವೆ ಮಾಡಿಕೊಂಡು, ಮೋಸ ಮಾಡಿದ್ದಾರೆ’ ಎಂದು ಕಳೆದ ಮಾರ್ಚ್‌ 21ರಂದು ದೂರು ಸಲ್ಲಿಸಿದ್ದರು‌.

ಹಲ್ಲೆ, ಜಾತಿ ನಿಂದನೆ, ಲೈಂಗಿಕ ದೌರ್ಜನ್ಯದಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪುರುಷೋತ್ತಮ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಿಂದ ಇಷ್ಟು ಮಂದಿ ತಲೆ ಮರೆಸಿಕೊಂಡಿದ್ದರು.

ತಲೆ ರೆಸಿಕೊಂಡಿದ್ದ ಪುರುಷೋತ್ತಮ್ ಹಾಗೂ ಮತ್ತೊಬ್ಬ ಆರೋಪಿ ಪದ್ಮನಾಭಯ್ಯ ಅವರು ಬೆಂಗಳೂರಿನ ಗಾಂಧಿನಗರದಲ್ಲಿ ಇರುವ ಕುರಿತು ಖಚಿತ ಮಾಹಿತಿ ಕಲೆ ಹಾಕಿದ್ದ ಪೊಲೀಸರಾದ ನವೀನ್ ಕುಮಾರ್ ಹಾಗೂ ಪ್ರದೀಪ್ ಎರಡು ದಿನಗಳ ಕಾಲ ವಸತಿ ಗೃಹದಲ್ಲಿದ್ದುಕೊಂಡು ಯೋಜನೆ ರೂಪಿಸಿ,ಇಬ್ಬರನ್ನು ಬಂಧಿಸಿ, ಠಾಣೆಗೆ ಕರೆದುಕೊಂಡು ಬಂದು ಮಹಜರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT