ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆಯಲ್ಲಿ ವಿಜೃಂಭಣೆಯ ಶೋಭಾಯಾತ್ರೆ, ಸಮಾವೇಶ

‘ಇತರರ ಸುಖಕ್ಕಾಗಿ ಬದುಕಿದ ಶ್ರೀರಾಮ’
Last Updated 29 ಏಪ್ರಿಲ್ 2019, 13:48 IST
ಅಕ್ಷರ ಗಾತ್ರ

ಹೊಸಕೋಟೆ: ಇಲ್ಲಿನ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಸತತ ಮೂರನೆಯ ವರ್ಷ ಶ್ರೀ ರಾಮಚಂದ್ರನ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. 16 ಅಡಿ ಏತ್ತರದ ರಾಮನ ಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಗಿತ್ತು. ಅದರ ಜೊತೆಗೆ ಹನುಮಂತನ ಮೂರು ಸ್ತಬ್ಧಚಿತ್ರಗಳು, ಕಾಮಧೇನುವಿನ ಸ್ತಬ್ಧಚಿತ್ರಗಳನ್ನು ಮೆರವಣಿಗೆಯಲ್ಲಿ ತರಲಾಗಿತ್ತು.

ವಿವೇಕಾನಂದ ಶಾಲೆಯಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಜನ ಬಾಗವಹಿಸಿದ್ದರು. ಮೆರವಣಿಗೆಯ ಉದ್ದಕ್ಕೂ ತರುಣರು ರಾಮನ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಐದು ಗಂಟೆಗಳ ಮೆರವಣಿಗೆಯನ್ನು ಸಾರ್ವಜನಿಕರು ರಸ್ತೆಯ ಬದಿಯಲ್ಲಿ ನಿಂತು ವೀಕ್ಷಿಸಿದರು. ರಸ್ತೆಯುದಕ್ಕೂ ಪಾನಕ, ನೀರುಮಜ್ಜಿಗೆ, ಕೋಸಂಬರಿಗಳನ್ನು ಜನರು ಹಂಚಿದರು. ಹಳೆಯ ಬಸ್ಸು ನಿಲ್ದಾಣದಲ್ಲಿ ಮುಸ್ಲಿಮರು ಜನರಿಗೆ ಪಾನಕ, ಮಜ್ಜಿಗೆ ಹಂಚಿದರು.

ವ್ಯಾಪಾರಿಗಳು ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿ ಭಾಗವಹಿಸಿದ್ದರು. ನಂತರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮ ಜಾಗರಣಾ ವೇದಿಕೆಯ ಮುನಿಯಪ್ಪ ಅವರು, ದೇಶಕ್ಕೆ ಈಗಲೂ ರಾಮನೇ ಆದರ್ಶ ಪುರುಷ ಎಂದರು.

‘ರಾಮನಿಗೆ ದೇವಸ್ಥಾನ ಬೇಡ, ಆರತಿ ಬೇಡ, ನಮಗೆ ಬೇಕಾಗಿರುವದು ರಾಮನ ಆದರ್ಶಗಳನ್ನು ಪಾಲಿಸಿವ ಜನರು, ನಾವು ಸಮಾಜವನ್ನು ಒಡೆಯುವುದಿಲ್ಲ. ಬದಲಾಗಿ ಸಮಾಜವನ್ನು ಜೋಡಿಸುತ್ತೇವೆ’ ಎಂದರು.

‘ನಮ್ಮ ಶೋಭಾಯಾತ್ರೆ ಸಮಾಜದ ಸಂಘಟನೆಗೆ ಹೊರತು ಬೇರೊಂದು ಸಮಾಜವನ್ನು ಕೆರಳಿಸಲು ಅಲ್ಲ, ನಾವು ಸಮಾಜವನ್ನು ಅರಳಿಸುತ್ತೇವೆ, ನಾವು ಸಮಾಜವನ್ನು ಕೆರಳಿಸುವುದಿಲ್ಲ ನಾವು ಗುಣದಲ್ಲಿ ರಾಮರಾಗಬೇಕು; ರಾವಣರಾಗಬಾರದು’ ಎಂದರು.

‘ಭಾರತವನ್ನು ವಿಶ್ವ ನೋಡುವ ರೀತಿ ಈಗ ಬದಲಾಗಿದೆ. ಭಾರತದಲ್ಲಿ ಸೈನಿಕರನ್ನು ನೋಡುವ ಮಾನಸಿಕತೆಯೂ ಈಗ ಬದಲಾಗಿದೆ. ಸಮಾಜ ಜಾಗೃತಿಯೇ ಇದಕ್ಕೆ ಕಾರಣ ಎಂದು ಅಬಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪನ್ಯಾಸಕಿ ಅನಿತಾ ಎನ್ ಕುಮಾರ್ ಅವರು ಮಾತನಾಡಿ, ಭಾರತದ ಇತಿಹಾಸದಲ್ಲಿ ಬರುವ ಸಾವಿರಾರು ಜನರಲ್ಲಿ ರಾಮ ಮಾತ್ರ ಆದರ್ಶ ಪುರುಷ ಎಂದು ತಿಳಿಸಿದರು.

ರಾಮನು ತನ್ನ ಜೀವನದಲ್ಲಿ ಎಂದು ಸುಖವಾಗಿರಲಿಲ್ಲ. ಆದರೂ ಇತರರ ಸುಖಕ್ಕಾಗಿ ಬದುಕಿದ. ರಾಮನ ರಾಜ್ಯದಲ್ಲಿ ಅಗಸನ ಮಾತಿಗೂ ಬೆಲೆಯಿತ್ತು. ಅದಕ್ಕಾಗಿ ನಮಗೆ ಈಗಲೂ ರಾಮರಾಜ್ಯ ಬೇಕು ಎಂದರು.

ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಶಂಕರ್ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯದರ್ಶಿ ನಂದರಾಮ್ ಸಿಂಗ್ ಸ್ವಾಗತಿಸಿದರು. ಜಯಚಂದ್ರ ವಂದಿಸಿದರು. ಮೆರವಣಿಗೆಯ ಪ್ರಾರಂಭದಲ್ಲಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT