ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಗ್ಯಾರಂಟಿ ತಾತ್ಕಾಲಿಕ, ಕೇಂದ್ರದ್ದು ಶಾಶ್ವತ; ಡಾ.ಕೆ.ಸುಧಾಕರ್

ನಂದಗುಡಿಯ ಕಾರ್ಯಕರ್ತರ ಸಭೆಯಲ್ಲಿ ಡಾ.ಕೆ.ಸುಧಾಕರ್
Published 8 ಏಪ್ರಿಲ್ 2024, 5:12 IST
Last Updated 8 ಏಪ್ರಿಲ್ 2024, 5:12 IST
ಅಕ್ಷರ ಗಾತ್ರ

ಹೊಸಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳು ತಾತ್ಕಾಲಿಕವಾದದ್ದು, ಆದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುವುದು ಶಾಶ್ವತ ಗ್ಯಾರಂಟಿ. ಜನರಿಗೆ ಬೇಕಿರುವುದು ಶಾಶ್ವತ ಗ್ಯಾರಂಟಿಗಳು. ಜನರನ್ನು ಶಾಶ್ವತವಾಗಿ ಸ್ವಾವಲಂಬಿಯಾಗಿಸುವ ಬಿಜೆಪಿಗೆ ಮತ ನೀಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ನಂದಗುಡಿ ಗ್ರಾಮದಲ್ಲಿ ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ನಂದಗುಡಿ ಮತ್ತು ಸೂಲಿಬೆಲೆ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ನಡೆಯುತ್ತಿರುವ ಚುನಾವಣೆ ದೇಶ‌ ಅಭಿವೃದ್ಧಿಗಾಗಿ ನಡೆಯುತ್ತಿದೆ. ದೇಶದ ಉನ್ನತಿ, ಸಮಗ್ರತೆ ಬಯಸುವ ಪ್ರತಿಯೊಬ್ಬರೂ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು. ಮೋದಿ ಅಧಿಕಾರಕ್ಕೆ ತರಬೇಕಿದೆ. ಇಲ್ಲದಿದ್ದರೆ ಮೋದಿ ಕನಸು ಕಂಡಿರುವಂತೆ ಮಹಿಳೆಯರ, ರೈತರ, ಬಡವರ ಸ್ವಾಭಿಮಾನದ ಬದುಕು ರೂಪಿಸುವ ಕನಸ ನನಸಾಗಲು ಸಾಧ್ಯವಿಲ್ಲ ಎಂದರು.

ರೈತರಿಗಿಲ್ಲ ಪ್ರೋತ್ಸಾಹ ಧನ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುತ್ತಿದೆ. ಈ ಭಾಗದಲ್ಲಿ ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಸುಮಾರು ೮ ತಿಂಗಳಿನಿAದ ತಾವು ಹಾಕುವ ಹಾಲಿಗೆ ಪ್ರೋತ್ಸಾಹ ದನ ನೀಡಿಲ್ಲ. ಅಲ್ಲದೆ ರೈತರಿಗಾಗಿ ನೀಡುತ್ತಿರುವ ಹಲವು ಪ್ರೋತ್ಸಾಹ ದನಗಳನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಆದ್ದರಿಂದಲೇ ನಾನು ಕೇಂದ್ರ ಸರ್ಕಾರವನ್ನು ಕೊಡುವ ಸರ್ಕಾರ, ರಾಜ್ಯ ಸರ್ಕಾರವನ್ನು ಕಿತ್ತುಕೊಳ್ಳುವ ಸರ್ಕಾರ ಎಂದು ಹೇಳುತ್ತೇನೆ ಎಂದರು.

ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ‘ಹೊಸಕೋಟೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸಚಿವನಾಗಿದ್ದಾಗ ಹಲವು ಯೋಜನೆ ಹಾಕಿಕೊಟ್ಟಿದ್ದೇನೆ. ಅದನ್ನೇ ಇಂದು ನಮ್ಮವೆಂದು ಹೇಳಿಕೊಂಡಿ ಕಾಂಗ್ರೆಸ್‌ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್, ಉಪಾಧ್ಯಕ್ಷ ಎಂ.ಚಂದ್ರಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಜಿ.ಪಂ ಮಾಜಿ ಸದಸ್ಯ ಸಿ.ನಾಗರಾಜ್, ವೈಎಸ್‌ಎಂ ಮಂಜು, ರಘುವೀರ್, ಖಿಜರ್ ಅಹಮದ್, ಬಾಲಚಂದ್ರ, ಕೆ.ಸುರೇಶ್, ಚಂದ್ರ ಮೋಹನ್, ಹನುಮಂತೆಗೌಡ, ಸುಜಾತ ನಾಗರಾಜ್ ಇದ್ದರು.

ಕಾಂಗ್ರೆಸ್‌ ಅಧಿಕಾರದಿಂದ ಬರ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರ ಬರುತ್ತದೆ ಎಂಬುದಕ್ಕೆ ಪಸ್ತುತ ರಾಜ್ಯದ ಸ್ಥಿತಿಯೇ ಉದಾಹರಣೆ. ಅಲ್ಲದೆ ಇಂದು ಬೆಂಗಳೂರಿನಲ್ಲಿ ನೀರಿಗೆ ತೀವ್ರ ಸಮಸ್ಯೆ ಉಂಟಾಗಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಇಂದು ಕಾವೇರಿ ನೀರನ್ನು ಕದ್ದು ಮುಚ್ಚಿ ತಮಿಳುನಾಡಿಗೆ ಬಿಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳು ಈ ರಾಜ್ಯದಲ್ಲಿ ಉದ್ಬವಿಸಲಿವೆ ಡಾ.ಕೆ.ಸುಧಾಕರ್ ಮೈತ್ರಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT