ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ದೇವಾಲಯ ತೆರವಿಗೆ ಸೂಚನೆ 

Last Updated 16 ಜನವರಿ 2020, 12:46 IST
ಅಕ್ಷರ ಗಾತ್ರ

ದೇವನಹಳ್ಳಿ: 2009ರಿಂದ ಈವರೆಗೆ ರಸ್ತೆ ಬದಿ ನಿರ್ಮಾಣವಾಗಿರುವ ದೇವಾಲಯಗಳನ್ನು ತೆರವುಗೊಳಿಸಬೇಕು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಒತ್ತುವರಿ ವಿವರಿಸಿದ ಅವರು, ‘ಒಂದು ಕೋತಿ ಅಕಸ್ಮಿಕ ಮರಣಹೊಂದಿದರೆ ರಸ್ತೆ ಬದಿ, ಎರಡು ರಸ್ತೆಗಳು ಸೇರುವ ಮಧ್ಯದ ಜಾಗ ಶವ ಸಂಸ್ಕಾರ ಮಾಡಿ ಆರಂಭದಲ್ಲಿ ಚಿಕ್ಕ ಕಲ್ಲುಗಳನ್ನಿಟ್ಟು ನಂತರ ತಗಡಿನ ಗುಡಿ ನಿರ್ಮಾಣ ಮಾಡಿ ಒಂದೆರಡು ವರ್ಷಕ್ಕೆ ಗುಡಿ ದೇವಾಲಯ ನಿರ್ಮಾಣ ಮಾಡುತ್ತಾರೆ. ದೇವಾಲಯ ಅಭಿವೃದ್ಧಿಯಾಗುತ್ತದೆ. ಮತ್ತೊಂದೆಡೆ ಕಡೆ ಭಿಕ್ಷುಕರ ಸಂಖ್ಯೆಯೂ ಹೆಚ್ಚುತ್ತದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಛ ನ್ಯಾಯಾಲಯ 2019ರಲ್ಲಿ ಆದೇಶ ನೀಡಿ ಯಾವುದೇ ದೇವಸ್ಥಾನ ಮಸೀದಿ ಚರ್ಚ್ ಮಂದಿರಗಳು ನಿಷೇಧಿತ ಸ್ಥಳಗಳಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದರೆ ತೆರವುಗೊಳಿಸುವುದು ಕಡ್ಡಾಯ ಎಂದು ಹೇಳಿದೆ’ ಎಂದರು.

ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಮೊದಲು ಪಟ್ಟಿ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸರ್ವೋಚ್ಛ ನ್ಯಾಯಾಲಯವೇ ಆದೇಶ ನೀಡಿರುವುದರಿಂದ ಕೆಳ ಹಂತದ ನ್ಯಾಯಾಲಯ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರು ಅಕ್ಷೇಪ ಮಾಡಿದರೆ ಸಮಾಧಾನದಿಂದ ಆದೇಶವಾಗಿರುವ ಬಗ್ಗೆ ಮನವರಿಕೆ ಮಾಡಿ, ಒಪ್ಪದಿದ್ದರೆ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿ, ತೆರವು ಕಾರ್ಯಾಚರಣೆ ಸಮಿತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು, ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್‌, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಭೂ ಮಾಪನ ಇಲಾಖೆ ಸಂಬಂಧಿಸಿದ ದೇವಾಲಯಗಳ ಜಾಗವನ್ನು ಗುರುತಿಸಬೇಕು. ತಾಲ್ಲೂಕು ಪಂಚಾಯಿತಿ ಇಲಾಖೆ ಸಹಕಾರ ನೀಡಬೇಕು ಮಾರ್ಚ್‌ 31ರೊಳಗೆ ತೆರವು ಕಾರ್ಯಚರಣೆತಯ ಗಡುವು ಮುಗಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT