ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯ ಯೋಜನೆ: ಸಾಧನೆಯಾಗದ ಗುರಿ

ಅವಧಿಯೊಳಗೆ ಪೂರ್ಣಗೊಳ್ಳದಿದ್ದರೆ ಅನುದಾನ ಹಿಂದಕ್ಕೆ
Last Updated 27 ಡಿಸೆಂಬರ್ 2022, 6:06 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರಕ್ಕೆ ಹೊಂದಿಕೊಂಡಿರುವ ಭೂ ಪ್ರದೇಶವಾಗಿದ್ದು, ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಿದೆ. ಆದರೂ ಇಲ್ಲಿ ವಾಸಿಸುವ ಬಡವರ ಸಂಖ್ಯೆಯೇನು ಕಡಿಮೆ ಇಲ್ಲ. ಸಾವಿರಾರು ನಿವೇಶನ ರಹಿತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೂ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ. ಅದರ ಸದ್ಬಳಕೆಗೆ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡುವ ಅಗತ್ಯತೆ ಸೃಷ್ಟಿಯಾಗಿದೆ.

ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಅನುಷ್ಠಾನಗೊಂಡಿರುವ ಪ್ರಧಾನ ಮಂತ್ರಿ ಅವಾಸ್‌ ವಸತಿ ಯೋಜನೆಯೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಿಲ್ಲ ಎಂಬುದಕ್ಕೆ ದತ್ತಾಂಶಗಳು ಪುಷ್ಟಿ ನೀಡುತ್ತದೆ.

ಮನೆ ನಿರ್ಮಾಣಕ್ಕೆ ವಿವಿಧ ಹಂತಗಳಲ್ಲಿ ಹಣ ಬಿಡುಗಡೆ ಸಂಬಂಧವಾಗಿ ಉಂಟಾಗಿರುವ ತಾಂತ್ರಿಕ ದೋಷಗಳು ನಿವಾರಣೆಯಾಗುತ್ತಿಲ್ಲ. ಜಿಪಿಎಸ್, ಆಡಿಟ್‌ ಪೆಂಡಿಂಗ್‌, ಕ್ಲಿಯರೆನ್ಸ್‌ ಎಂಬ ಅನೇಕ ತೊಡಕುಗಳು ಸೂರು ನಿರ್ಮಾಣಕ್ಕೆ ತಡೆಒಡ್ಡುತ್ತಿದೆ ಎನ್ನಲಾಗಿದೆ. ಇನ್ನು ಸರ್ಕಾರದಿಂದ ಗ್ರಾ.ಪಂ ಗೆ ನೀಡಲಾಗುವ ಮನೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟಿದ್ದು, ಫಲಾನುಭವಿಗಳ ಸಂಖ್ಯೆ ದೊಡ್ಡದಿರುತ್ತದೆ.

ಪಿಎಂಎವೈ ಅನುಷ್ಠಾನಗೊಂಡಿಲ್ಲ: ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಪ್ರಧಾನ ಮಂತ್ರಿ ಅವಾಸ್‌ ಯೋಜನೆಯ ಅಡಿಯಲ್ಲಿ ಗುರಿ ನೀಡಲಾಗಿದ್ದು, ಈವರೆಗೂ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಶೇ 100 ಗುರಿ ಸಾಧಿಸಿಲ್ಲ. ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಯೋಜನೆ ಅನುಷ್ಠಾನದ ಬಗ್ಗೆ ಚರ್ಚೆ ಮಾಡುತ್ತಾರೆ ಹೊರತು, ಯಾವುದೇ ಪ್ರಗತಿ ಕಾರ್ಯ ನಡೆದಿರುವುದರ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂಬುದು ದಿಶಾ ಸದಸ್ಯರ ಆರೋಪ.

ಮನೆ ವಾಪಸ್ಸಾದರೆ ಜಿಲ್ಲಾಡಳಿತ ಹೊಣೆ: 2016 ರಿಂದ 2019-20ರ ಸಾಲಿನವರೆಗೂ ಒಟ್ಟು 31,998 ಮನೆಗಳೂ ಡಿಸೆಂಬರ್‌
ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಇನ್ನೂ 2019-20ರ ಸಾಲಿನ ಮನೆಗಳು ಪ್ರಾರಂಭವೇ ಆಗಿಲ್ಲ. ಅದನ್ನೂ ಈ ತಿಂಗಳಲ್ಲಿ ಪ್ರಾರಂಭಿಸುವಂತೆ ನಿರ್ದೇಶನವಾಗಿದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಮಂಜೂರಾದ ಮನೆಗಳು ರದ್ದುಗೊಳ್ಳುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ಗುರಿಯನ್ನು ತಲುಪುವ ಟಾಸ್ಕ್‌ ಅಧಿಕಾರಿಗಳ
ಮುಂದಿದೆ.

ನಾಲ್ಕು ಹಂತದಲ್ಲಿ ಅನುದಾನ: ವಸತಿ ಯೋಜನೆಯಡಿ ಆಯ್ಕೆ ಆಗುವ ಫಲಾನುಭವಿಗಳಿಗೆ 4 ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮೊದಲ ಕಂತು ಪಾಯ, 2ನೇ ಕಂತು ಗೋಡೆ, 3ನೇ ಕಂಡು ಚಾವಣಿ, 4ನೇ ಕಂತು ಕಾಮಗಾರಿ ಪೂರ್ಣಗೊಂಡ ಬಳಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT