ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಟೊಮೆಟೊ, ತರಕಾರಿ ಟ್ರ್ಯಾಕ್ಟರ್‌ ಕದ್ದೊಯ್ಯುತ್ತಿದ್ದ ಕಳ್ಳರ ಬಂಧನ

Published 2 ಆಗಸ್ಟ್ 2023, 6:22 IST
Last Updated 2 ಆಗಸ್ಟ್ 2023, 6:22 IST
ಅಕ್ಷರ ಗಾತ್ರ

ಹೊಸಕೋಟೆ: ಮಾರುಕಟ್ಟೆಗೆ ಟೊಮೆಟೊ ಮತ್ತು ತರಕಾರಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು ಹೊಸಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕೋಲಾರದ ಶಿವಾನಂದ ಹಾಗೂ ಆನಂದ ಬಂಧಿತರು. ಬಂಧಿತರಿಂದ ಸುಮಾರು 12 ಟ್ರ್ಯಾಕ್ಟರ್‌ ವಶಪಡಿಸಿಕೊಳ್ಳಲಾಗಿದೆ.

ಬೆಳೆ ಕಟಾವಿಗೆ ಬಂದ ತೋಟಗಳ ಮೇಲೆ ಕಣ್ಣಿಡುತ್ತಿದ್ದ ಈ ಇಬ್ಬರೂ ಲೋಡ್‌ ಮಾಡಿಟ್ಟಿರುತ್ತಿದ್ದ ಟ್ರ್ಯಾಕ್ಟರ್‌ ಸಮೇತ ಪರಾರಿಯಾಗುತ್ತಿದ್ದರು. ಒಂದು ವರ್ಷದಿಂದ ಕೋಲಾರ, ಚಿಂತಾಮಣಿ, ಹೊಸಕೋಟೆ ಭಾಗದಲ್ಲಿ ನಡೆಯುತ್ತಿದ್ದ ಈ ಪ್ರಕರಣ ರೈತರ ನಿದ್ದೆಗೆಡಿಸಿದ್ದವು. ಪೊಲೀಸರಿಗೂ ತಲೆನೋವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT