ವಿಜಯಪುರ(ದೇವನಹಳ್ಳಿ): ವಡಾಪಾವ್ ಎಂದ ಕೂಡಲೇ ಎಲ್ಲರಿಗೂ ಮಹಾರಾಷ್ಟ್ರದ ಮುಂಬೈ ನಗರ ನೆನಪಾಗುತ್ತದೆ. ಅಲ್ಲಿನ ಜನರಿಗೆ ವಡಾಪಾವ್ ಇಲ್ಲದೆ ಬೆಳಗಿನ ತಿಂಡಿ ಪೂರ್ಣಗೊಳ್ಳುವುದಿಲ್ಲ. ಅಂತಹ ತಿಂಡಿಯನ್ನು ಅದೇ ಸವಿಯಲ್ಲಿ ಪಟ್ಟಣದ ಜನರಿಗೂ ನೀಡಲಾಗುತ್ತಿದ್ದು, ವಡಾಪಾವ್‌ಗಾಗಿ ಯುವಕರು, ಯುವತಿಯರು ಮುಗಿಬೀಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಬಿಗ್ ಮುಂಬಾ ವಡಾಪಾವ್ ಕೆಫೆಯಲ್ಲಿ ಮುಂಬೈ ವಡಾಪಾವ್, ಮಸಾಲ ವಡಾಪಾವ್, ಜಂಬೂ ವಡಾಪಾವ್, ಪೆರಿಪೆರಿ ವಡಾಪಾವ್, ಜನ್ ಜನಿತ್ ವಡಾಪಾವ್, ತಂದೂರಿ ವಡಾಪಾವ್, ಕ್ರಿಸ್ಪಿವಡಾಪಾವ್, ಆನಿಯನ್ ವಡಾಪಾವ್, ಸಾಬುದಾನ್ ವಡಾ, ಹೋಗೆ ತರಹೆವಾರಿ ಪಾಸ್ಟ್ ಪುಡ್ ತಯಾರಾಗುತ್ತಿದೆ. ಇದರೊಂದಿಗೆ ಬಗೆ ಬಗೆಯ ಪಾನೀಯಗಳು ಲಭ್ಯ.

ನೇಪಾಳ, ಮುಂಬೈನ ಪರಿಣಿತರು, ತರಹೆವಾರಿ ವಡಾಪಾವ್ ತಯಾರಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಕುಟುಂಬ ಸಮೇತರಾಗಿ ಬರುವ ಜನರು ಇಲ್ಲಿನ ಖಾದ್ಯಗಳಿಗೆ ಮನಸೋತಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಈ ಹೊಸ ಮಾದರಿಯ ಆಹಾರ ವಿಭಿನ್ನ ಎನಿಸುತ್ತಿದೆ. ವಡಾಪಾವ್‌ನೊಂದಿಗೆ ಇಲ್ಲಿ ತಯಾರಿಸುವ ಪಿಜ್ಜಾ, ರೋಲ್ಸ್, ಫ್ರೈಸ್, ಬರ್ಗರ್, ಚಟ್ ಪಟ್, ಮೊಮೋಸ್ ಮುಂತಾದ ತಿಂಡಿಗಳಿಗೂ ಬೇಡಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.