ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಏಳಿಗೆಗೆ ಶ್ರಮಿಸಿದ ವೇಮನ: ಜಗದೀಶ್‌ ರೆಡ್ಡಿ

Last Updated 19 ಜನವರಿ 2020, 14:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವೇಮನರು ಸರಳ ಭಾಷೆಗಳಲ್ಲಿ ನುಡಿಗಟ್ಟುಗಳನ್ನು ರಚಿಸಿ ಜನರಿಗೆ ಮನವರಿಕೆ ಮಾಡಿಕೊಡುತ್ತ ಸಮಾಜ ಸುಧಾರಣೆಯಲ್ಲಿ ಶ್ರಮಿಸಿ ಇಂದಿಗೂ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಎಂದು ಶ್ರೀವೇಮನ ರೆಡ್ಡಿ ಜನ ಸಂಘದ ತಾಲ್ಲೂಕು ಅಧ್ಯಕ್ಷ ಜಗದೀಶ್‌ ರೆಡ್ಡಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಾಯೋಗಿ ವೇಮನರ 608ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸ್ತುತ ದಿನದಲ್ಲಿ ವೇಮನ ಜಯಂತಿ ನಮಗೆಲ್ಲ ಆದರ್ಶಪ್ರಾಯವಾಗಿದೆ. ಅವರು ಯೋಗಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆದಿದ್ದು, ಶ್ರೇಷ್ಠ ಸಂತರಾಗಿ, ದಾರ್ಶನಿಕರಾಗಿ, ಕವಿಯಾಗಿ ಮನುಕುಲದ ಏಳಿಗೆಗೆ ಸರಳ ಸಹಜವಾದ ಪ್ರಕೃತಿ ಧರ್ಮವನ್ನು ಉಪದೇಶಿಸಿದ ಮಹಾಯೋಗಿಗಳು’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಹನುಮಂತರೆಡ್ಡಿ ಮಾತನಾಡಿ, ‘17ನೇ ಶತಮಾನದಲ್ಲಿ ಜೀವಿಸಿದ್ದ ವೇಮನ ತತ್ವಜ್ಞಾನಿ, ದಾರ್ಶನಿಕರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಇಹದ ಬದುಕಿನ ಅರಿವಾಗಿ ಭೋಗಜೀವನ ತ್ಯಜಿಸಿದ ವೇಮನರು ಇಹದ ಬದುಕಿನ ಅರಿವು ಪಡೆದುಕೊಂಡು ಪಾರಮಾರ್ಥಿಕ ಹಾದಿಯಲ್ಲಿ ಸಾಗಿದ ಮಹಾಯೋಗಿ ಎನಿಸಿಕೊಂಡವರು’ ಎಂದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಶಿರಸ್ತೆದಾರ್ ಸುರೇಶ್, ರಾಜಸ್ವ ನಿರೀಕ್ಷಕ ನರಸಿಂಹ, ಉಪಾಧ್ಯಕ್ಷ ಶಿವಾರೆಡ್ಡಿ, ಸಹ ಕಾರ್ಯದರ್ಶಿ ಶಂಗಪ್ಪ, ಸಂಘಟನ ಕಾರ್ಯದರ್ಶಿ ರಾಮಾಂಜಿನಪ್ಪ, ಮುಖಂಡರಾದ ಬಿ.ಆನಂದರೆಡ್ಡಿ, ಜಯರಾಮ ರೆಡ್ಡಿ, ಅಶ್ವಥ್‌ ರೆಡ್ಡಿ, ವೆಂಕಟರಾಮ ರೆಡ್ಡಿ, ಪುಟ್ಟರಾಜುರೆಡ್ಡಿ, ಶಿಕ್ಷಕರಾದ ಮಲ್ಲಿಕಾರ್ಜುನ ರೆಡ್ಡಿ, ಹರೀಶ್‍ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT