ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರದಲ್ಲಿ ವಿಜೃಂಭಣೆಯ ಗಂಧ-ಉರುಸ್

Published : 4 ಸೆಪ್ಟೆಂಬರ್ 2024, 15:29 IST
Last Updated : 4 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ ಗ್ರಾಮದ ಹಜರತ್ ಸೈಯದನ ಬಾಬಾ ಫಕ್ರುದ್ಧೀನ್ ಚಿಶ್ಠಿ ಉಲ್ ಖಾದರಿಯಾ ದರ್ಗಾದಲ್ಲಿ ಬುಧವಾರ ಗಂಧ ಮತ್ತು ಉರುಸ್  ವಿಜೃಂಭಣಿಯಿಂದ ನಡೆಯಿತು.

ಗಂಧ ಉರುಸ್ ಅಂಗವಾಗಿ ದರ್ಗಾವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ನೆರೆದಿದ್ದ ಭಕ್ತರಿಗೆ ಅನ್ನದಾನ ಮಾಡಿದರು. ದರ್ಗಾದಲ್ಲಿರುವ ಸಮಾಧಿಗೆ ಚಾದರ ಹಾಗೂ ಮಲ್ಲಿಗೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದರ್ಗಾದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿಗೆ ಬಂದಿದ್ದ ಭಕ್ತರು, ಮೇಣದ ಬತ್ತಿಗಳನ್ನು ಹತ್ತಿ, ಹೂಗಳನ್ನು ಹಾಕಿ, ಒಣಗಿದ ಹಣ್ಣು ಎರಚಿ, ಪ್ರಾರ್ಥನೆ ಸಲ್ಲಿಸಿ, ಹರಕೆ ಮಾಡಿಕೊಂಡರು. ವಿಜಯಪುರದ ದರ್ಗಾದಿಂದ ಮೆರವಣಿಗೆಯ ಮೂಲಕ ಗಂಧವನ್ನು ತೆಗೆದುಕೊಂಡು ಬಂದರು.

ವಿವಿಧ ಕಲಾವಿದರು ಉರುಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಕವ್ವಾಲಿ ಕಲಾವಿದರ ಅಲ್ಲಾಹ್‌ ಸ್ಮರಿಸುವ ಗೀತಗಾಯನ ಮಾಡಿದರು. ವಿಜಯಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಮಂದಿ ಭಕ್ತರು ನೆರೆದಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ದರ್ಗಾಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ನಾನೂ ಕೂಡ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್‌ನ್ನು ಪಠಣ ಮಾಡಿದ್ದೇನೆ. ಇರುವುದನ್ನು ಹಂಚಿಕೊಂಡು ತಿನ್ನುವಂತಹ ಸಂದೇಶವು ನನಗೆ ಬಹುಪ್ರಿಯವಾದದ್ದು, ಹಿಂದೂ, ಮುಸ್ಲಿಂ ಸಮುದಾಯಗಳು ಸಹೋದರತೆಯಿಂದ ಸಹಬಾಳ್ವೆ ಮಾಡಿಕೊಂಡು ಹೋಗಬೇಕು’ ಎಂದು ಹೇಳಿದರು.

ಬಯಪಾ ಅಧ್ಯಕ್ಷ ಶಾಂತಕುಮಾರ್ ಮಾತನಾಡಿದರು.

ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ಈ ದೇಶದ ಸಂವಿಧಾನದಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ ಧಾರ್ಮಿಕ ಕಾರ್ಯಗಳನ್ನು ಒಗ್ಗಟ್ಟಿನಿಂದ ಮಾಡಿಕೊಂಡು ಹೋಗಬೇಕು. ಪರಸ್ಪರ ಸ್ನೇಹಭಾವದಿಂದ ನಡೆದುಕೊಂಡು ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್‌ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪುರಸಭೆ ಸದಸ್ಯರಾದ ಎ.ಆರ್.ಹನೀಪುಲ್ಲಾ, ಸೈಯದ್ ಎಕ್ಭಾಲ್, ಎಂ.ನಾರಾಯಣಸ್ವಾಮಿ, ಮಾಜಿ ಉಪಾಧ್ಯಕ್ಷ ಜೆ.ಎನ್.ಶ್ರೀನಿವಾಸ್, ಎನ್. ಗ್ಯಾಸ್ ಶ್ರೀನಿವಾಸ್, ಕೆ.ಎಂ.ವಿಶ್ವನಾಥ್, ಧರ್ಮಪುರ ಕೃಷ್ಣಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವೇಣುಗೋಪಾಲ್, ಮುನಿನಾರಾಯಣಪ್ಪ, ಅಪ್ಜಲ್, ಜಗದೀಶ್, ನಿಸಾರ್ ಅಹಮದ್ ಹಾಜರಿದ್ದರು.

ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ದರ್ಗಾ

ದರ್ಗಾ ವಕ್ಫ್ ಬೋರ್ಡ್ ಸುಪರ್ಧಿಗೆ ಸೇರದ ಕಾರಣ ಯಾವುದೇ ಅನುದಾನ ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲ. ಸಚಿವ ಜಮೀರ್ ಅಹಮದ್ ಅವರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಮುಂದಿನ ವರ್ಷದೊಳಗೆ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅನುದಾನದೊಂದಿಗೆ ಇಲ್ಲಿಗೆ ಬರುವುದಾಗಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು. ಪಟ್ಟಣದಲ್ಲಿ 3 ಶಾದಿಮಹಲ್‌ಗೆ ₹3. 90 ಕೋಟಿ ಚಿಕ್ಕತತ್ತಮಂಗಲದ ಬಳಿಯಿರುವ ಜಂಗ್ಲಿಪೀರ್ ಬಾಬಾ ದರ್ಗಾದ ಬಳಿ ₹30 ಲಕ್ಷ ಜಾಮೀಯಾ ಮಸೀದಿಗೆ ₹30 ಲಕ್ಷ ಖಬರೇಸ್ತಾನ್‌ಗೆ ₹1 ಕೋಟಿ ಮಂಜೂರು ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT