ವಿಜಯಪುರ (ದೇವನಹಳ್ಳಿ): ಹೋಬಳಿಯ ಗಡ್ಡದನಾಯನಹಳ್ಳಿ ಗ್ರಾಮದಲ್ಲಿ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೊತ್ಸವ ಪ್ರಯುಕ್ತ ಸೆ.30 ರಂದು ದೇವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.

ಮಧ್ಯಾಹ್ನ 12 ಗಂಟೆಗೆ ದುರ್ಗಾ ಮಹೇಶ್ವರಿ ಅಮ್ಮನವರ ಆನೆ ಅಂಬಾರಿ ಉತ್ಸವಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಚಾಲನೆ ನೀಡಲಿದ್ದಾರೆ. ಇದೇ ವೇಳೆ ಆರು ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ವೀರಭದ್ರ ಕುಣಿತ, ಡೊಳ್ಳು ಕುಣಿತ, ನವದುರ್ಗಿ ಕುಣಿತ, ಗಾರುಡಿ ಗೊಂಬೆ, ಕೀಲು ಕುಣಿತ ಮೆರವಣಿಗೆಗೆ ಮೆರಗು ನೀಡಲಿವೆ. ಕಲಾ ತಂಡದಿಂದ ಕಥಾಕಾಲಕ್ಷೇಪ ಹಾಗೂ ಭರತ ನಾಟ್ಯ, ಯಕ್ಷಗಾನ ನಡೆಯಲಿದೆ.

ಅ.1 ಮತ್ತು ಅ.2 ರಂದು ದೇವಾಲಯದಲ್ಲಿ ವಿಶೇಷ ಪೂಜೆ, ವಿವಿಧ ಸಾಂಸ್ಕೃಂತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಧರ್ಮಾಧಿಕಾರಿ, ಪ್ರಧಾನ ಅರ್ಚಕ ನಾಗರಾಜಪ್ಪಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.