ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: 30 ವರ್ಷದಿಂದ ಶೆಡ್‌ ವಾಸ

Published 3 ಮಾರ್ಚ್ 2024, 14:01 IST
Last Updated 3 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ವಿಜಯಪುರ-ದೇವನಹಳ್ಳಿ ಮುಖ್ಯರಸ್ತೆಯ ನಡುವೆ ಇರುವ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ತಾತ್ಕಾಲಿಕ ಶೆಡ್‌ನಲ್ಲಿ ನಾಲ್ಕು ಕುಟುಂಬಗಳ 30 ಮಂದಿ 30 ವರ್ಷದಿಂದ ವಾಸವಾಗಿದ್ದಾರೆ.

ಮನೆ ಇಲ್ಲದ ಕಾರಣ 30 ವರ್ಷದಿಂದ ಶೆಡ್‌ನಲ್ಲಿಯೇ ವಾಸವಾಗಿದ್ದೇವೆ. ಶೆಡ್‌ ಮೇಲ್ಛಾವಣಿ ಶೀಟ್‌ ಮಳೆ ಬಂದರೆ ಸೋರುತ್ತದೆ ಎಂದು 1ನೇ ವಾರ್ಡ್‌ನ ಬಸಪ್ಪನ ತೋಪಿನ ಶೆಡ್‌ ನಿವಾಸಿಗಳು ಹೇಳುತ್ತಾರೆ. 

ಮಹಿಳೆಯರ ಸ್ನಾನ, ಶೌಚಕ್ಕೆ ಮನೆಯಲ್ಲಿ ಶೌಚಾಲಯ ಇಲ್ಲ. ಮನೆಗಳಿಗೆ ಬಾಗಿಲು ಇಲ್ಲ. ನೀರು ಬರಲ್ಲ. ಪುರಸಭೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಾರಕ್ಕೊಮ್ಮೆ ₹600 ರೂಪಾಯಿ ಕೊಟ್ಟು ನಾಲ್ಕು ಕುಟುಂಬಗಳು ಟ್ಯಾಂಕರ್ ನೀರು ತರಿಸುತ್ತೇವೆ ಎನ್ನುತ್ತಾರೆ ಪಂಕಜ, ಶಿವಕುಮಾರ್, ಮಂಜುಳಾ, ಯಶೋಧ.

ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೇವೆ. ಇದನ್ನು ಹೊರತುಪಡಿಸಿದರೆ ಬೇರೆ ಸೌಲಭ್ಯ ಸಿಕ್ಕಿಲ್ಲ ಎಂದು ಮುನಿಯಪ್ಪ ಹೇಳುತ್ತಾರೆ.

ಬದುಕಿರುವಾಗಲೇ ನಮಗೊಂದು ಶಾಶ್ವತ ಸೂರು ಕಲ್ಪಿಸಿ ಇದಕ್ಕಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ

-ಅಕ್ಕಯಮ್ಮ ಸ್ಥಳೀಯ ನಿವಾಸಿ

ನೀರು ಪೂರೈಕೆಗೆ ಕ್ರಮ

ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ಭೂಮಿ ಮಂಜೂರು ಮಾಡುವುದು ನಮ್ಮ ಕೆಲಸವಲ್ಲ.  ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಪುರಸಭೆಯಿಂದ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರ ನೀರು ಸರಬರಾಜಿಗೆ ಪೈಪ್‌ಲೈನ್  ಅಳವಡಿಸಲಾಗುವುದು ಜಿ.ಆರ್.ಸಂತೋಷ್ ಪುರಸಭೆ ಮುಖ್ಯಾಧಿಕಾರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT