ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ಮೂವರು ಮಹಿಳೆಯರು ಕಾಣೆ

Published 3 ಮೇ 2024, 13:33 IST
Last Updated 3 ಮೇ 2024, 13:33 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಹೋಬಳಿಯಲ್ಲಿರುವ ಸರ್ವೊದಯಾ ಸರ್ವಿಸ್ ಸೊಸೈಟಿಯಲ್ಲಿ ಕಳೆದ ಒಂಭತ್ತು ತಿಂಗಳಿಂದ ರಕ್ಷಣೆಯಲ್ಲಿದ್ದ ಬಾಂಗ್ಲಾದೇಶದ ಮೂವರು ಮಹಿಳೆಯರು ಕಾಣೆಯಾಗಿದ್ದಾರೆ.

ಈ ಸಂಬಂಧ ಸೊಸೈಟಿಯಲ್ಲಿ ಉಜ್ವಲ ಯೋಜನಾ ನಿರ್ದೇಶಕಿ ರೇವತಿ ವಿಜಯಪುರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರಾದೇಶಿಕ ನೋಂದಣಿ ಕಚೇರಿಯ ಶಿಫಾರಸ್ಸಿನಂತೆ ಬಾಂಗ್ಲಾದೇಶದ ಬಾನುಪ್ರಿಯಾ, ನಸ್ರುತ್ ಜಹಾನ್, ರೂಬಿನಾ ಅಕ್ತರ್, ಪಿಂಕಿ ಮತ್ತು ರೂಪಾ ಅಕ್ತು ಅವರು ತಾತ್ಕಾಲಿಕವಾಗಿ ಸೊಸೈಟಿಯಲ್ಲಿ ರಕ್ಷಣೆ ಪಡೆದಿದ್ದರು.

ಏಪ್ರಿಲ್‌ 27ರಂದು ತಮಗೆ ವೈಯಕ್ತಿಕವಾಗಿ ಕೆಲ ಅಗತ್ಯ ವಸ್ತು ಖರೀದಿಸಬೇಕು. ವಿಜಯಪುರಕ್ಕೆ ಕರೆದುಕೊಂಡು ಹೋಗುವಂತೆ ಮನವಿ  ಮಾಡಿದ್ದರು. ಅದರಂತೆ ಐವರನ್ನು ವಿಜಯಪುರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ರೂಬಿನಾ ಅಕ್ತರ್, ಪಿಂಕಿ ಮತ್ತು ರೂಪಾ ಅಕ್ತು ಅವರು ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಸಿ‌ಕ್ಕಿಲ್ಲ. ಸೊಸೈಟಿಯಲ್ಲೂ ಕಾಣುತ್ತಿಲ್ಲ ಎಂದು ರೇವತಿ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT