ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆಯ 40 ಕೆರೆಗಳಿಗೆ ನೀರು: ಸಚಿವ ರಾಮಲಿಂಗಾರೆಡ್ಡಿ

Published 20 ಜನವರಿ 2024, 5:46 IST
Last Updated 20 ಜನವರಿ 2024, 5:46 IST
ಅಕ್ಷರ ಗಾತ್ರ

ಹೊಸಕೋಟೆ: ಈಗಾಗಲೆ ತಾಲ್ಲೂಕಿನ ನೀರಿನ ಬವಣೆ ತಪ್ಪಿಸುವ ಸಲುವಾಗಿ ತಾಲ್ಲೂಕಿನ 40 ಕೆರೆಗಳಿಗೆ ಏತನೀರಾವರಿ ಯೋಜನೆಯ ಮೂಲಕ ನೀರು ಹರಿಸಲಾಗುವುದು ಎಂದು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಸಿದ್ಧೇನಹಳ್ಳಿಯಲ್ಲಿ ಗಂಗಮ್ಮ ದೇವಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಕುಂಬಾಭಿಷೇಕ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಲು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಾಣಾಳಿಕೆಯಲ್ಲಿ ಪಕ್ಷ ನೀಡಿರುವ ಎಲ್ಲಾ ಆಶ್ವಾಸನೆ ಈಡೇರಿಸಲು ಬದ್ದರಾಗಿದ್ದೇವೆ’ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, `ಬಹುಸಂಖ್ಯಾತರು ಪೂಜಿಸುವ ದೇವರನ್ನು ಧರ್ಮದ ಹೆಸರಿನಲ್ಲಿ ಸಂಕುಚಿತಗೊಳಿಸುವುದಲ್ಲದೆ, ಒಂದು ರಾಜಕೀಯ ಪಕ್ಷಕ್ಕ ಸೀಮಿತಗೊಳಿಸುವ ಷಡ್ಯಂತ್ರ ಇಂದು ನಡೆಯುತ್ತಿದೆ. ದೇವರು ಮತ್ತು ದೇವಾಲಯಗಳು ಜನರನ್ನು ಒಗ್ಗೂಡಿಸುವ ಕೇಂದ್ರಗಳಾಗಬೇಕೇ ಹೊರತು, ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ವಿಷಾದನೀಯ ಎಂದು ಬೇಸರಿಸಿದರು.

ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ.ಮುನಿರಾಜು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಟಿಎಪಿಸಿಎಂಎಸ್ ಆಧ್ಯಕ್ಷ ಬಾಬುರೆಡ್ಡಿ, ರಾಮೋಜಿಗೌಡ, ಜಿ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಬಮೂಲ್ ನಿರ್ದೇಶಕ ಮಂಜುನಾಥ್, ಸಿದ್ದೇನಹಳ್ಳಿ ರಮೇಶ್, ಮಮತ ಮುನಿರಾಜು, ನಾರಾಯಣಗೌಡ, ತಾ.ಪಂ ಮಾಜಿ ಸದಸ್ಯ ಡಿ.ಟಿ.ವೆಂಕಟೇಶ್, ಸೂಲಿಬೆಲೆ ಗ್ರಾ.ಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಮಮತ ಗೋಪಾಲ್, ಗ್ರಾ.ಪಂ ಸದಸ್ಯ ಸುರೇಶ್, ನಗರೇನಹಳ್ಳಿ ನಾಗರಾಜಪ್ಪ, ಬುವನಹಳ್ಳಿ ಗೋಪಾಲಪ್ಪ, ಗಿಡ್ಡಪ್ಪನಹಳ್ಳಿ ಹನುಮರಾಜ್, ಅರಸನಹಳ್ಳಿ ಶಿವಪ್ಪ, ಯನಗುಂಟೆ ರಮೇಶ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಬೆಟ್ಟಹಳ್ಳಿ ನಾರಾಯಣಪ್ಪ, ಮುನಿಸೋಣ್ಣಪ್ಪ, ಚಿಕ್ಕಹರಳಗೆರೆ ಜಗದೀಶ್, ಡೇರಿ ವೆಂಕಟೇಶ್, ಅಂಗಡಿ ಮುನಿರಾಜು, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT