ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಂತಾರ: ಕೊರೆಯುವ ಚಳಿಗೆ ನಡುಗಿದ ಜನ

ಬೆಳಿಗ್ಗೆ 9ರ ವರೆಗೂ ಆವರಿಸಿರುವ ದಟ್ಟವಾದ ಮಂಜು
Last Updated 13 ಜನವರಿ 2023, 6:54 IST
ಅಕ್ಷರ ಗಾತ್ರ

ದೇವನಹಳ್ಳಿ(ಬೆಂ.ಗ್ರಾಮಾಂತರ): ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ವಾತಾವರಣದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಹೋಗುತ್ತಿದ್ದು, ದಿನ ನಿತ್ಯ ಬೆಳಿಗ್ಗೆ 9 ಗಂಟೆಯ ವರೆಗೂ ರಸ್ತೆಗಳೇ ಕಾಣದಂತಹ ಮಂಜು ಆವರಿಸುತ್ತಿದೆ. ಚಳಿಯಿಂದಾಗಿ ಮನೆಯಿಂದ ಹೊರ ಬರಲು ಜನರು ಹಿಂದೆಟ್ಟು ಹಾಕುತ್ತಿದ್ದು, ಸಂಕ್ರಮಣ ಸಮೀಪವಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ.

ನಿತ್ಯ ವಾಯು ವಿಹಾರಕ್ಕೆ ಬರುತ್ತಿರುವವರೂ ಬೆಳಿಗ್ಗೆ 8ರ ನಂತರ ಉದ್ಯಾನಗಳಲ್ಲಿ, ಕೆರೆ ಏರಿಗಳಲ್ಲಿ ಕಾಣಿಸುತ್ತಿದ್ದು, ಬಿಸಿ ಬಿಸಿ ಖಾದ್ಯಗಳಿಗೆ ಹೊಟೇಲ್‌ನಲ್ಲಿ ಬೇಡಿಕೆಯೂ ಹೆಚ್ಚಾಗಿದೆ. ಆದೇ ರೀತಿ ಮಕ್ಕಳು ಹಾಗೂ ವೃದ್ಧರಲ್ಲಿ ಆರೋಗ್ಯದ ಸಮಸ್ಯೆಯೂ ಕಾಣಿಸುತ್ತಿದೆ. ಮುಂಜಾನೆ ಕೆಲಸದ ನಿಮಿತ್ತ ಹೊರ ಹೋಗುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದ್ದು, ಲೈಟ್‌ಗಳನ್ನು ಬಳಸಿ ನಿಧಾನಗತಿಯಲ್ಲಿ ಸಾಗುವ ದೃಶ್ಯ ಸಾಮಾನ್ಯವಾಗಿದೆ.

ಮಧ್ಯಾಹ್ನದ ನಂತರ ಅಷ್ಟೇ ಪ್ರಖಾರವಾಗಿ ಸೂರ್ಯನ ಕಿರಣಗಳು ಭೂಮಿಯನ್ನು ಕಾಡುತ್ತಿದ್ದು, ಉಷ್ಟಾಂಶವೂ ಹೆಚ್ಚಾಗುತ್ತಿದೆ. ಬೆಳಿಗ್ಗಿನ ಚಳಿ ಹಾಗೂ ಮಧ್ಯಾಹ್ನದ ಬಿಸಿಲಿನ ವೈವಿಧ್ಯಮಯ ವಾತಾವರಣಕ್ಕೆ ಜನರು ತತ್ತರಿಸ ತೊಡಗಿದ್ದಾರೆ. ಬೆಳಿಗ್ಗಿನ ಚಳಿಯಲ್ಲಿ ಸ್ಪೆಟಲ್‌, ಟೋಪಿಯನ್ನು ಹಾಕುವ ಜನರು ಮಧ್ಯಾಹ್ನದ ವೇಳೆಗೆ ಬೆವರಿನಿಂದ ಸ್ನಾನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣ ಮಾಡುವವರ ಮೈ ನಡುಗುವ ದೃಶ್ಯಗಳು ಕಂಡು ಬರುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಜನರು ನಾನಾ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದ್ದು, ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳು ಭರ್ತಿಯಾಗುತ್ತಿದೆ. ಔಷಧಾಲಯಗಳ ಮುಂದೆ ಉದ್ದದ ಸರತಿ ಇದ್ದು, ಸಾಕಷ್ಟು ಮಕ್ಕಳು ಶಾಲೆಗೆ ರಜೆ ಹಾಕುತ್ತಿದ್ದಾರೆ.

ವಿಮಾನ ಹಾರಾಟ ವ್ಯತ್ಯಯ

ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದ ಕಳೆದ 3-4 ದಿನಗಳಿಂದ ವಿಮಾನ ಹಾರಾಟದಲ್ಲಿ ಕೊಂಚ ವ್ಯತ್ಯಯಗಳು ಆಗುತ್ತಿದೆ ಎಂದು ತಿಳಿದು ಬಂದಿದ್ದು, ಹೆಚ್ಚಿನ ಸಮಯ ಪ್ರಜ್ಞೆಯಿಂದ ಕೆಲಸ ನಿರ್ವಹಣೆ ಮಾಡಲು ಅಲ್ಲಿರುವ ಸಿಬ್ಬಂದಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT